ಪಂಪನ ಸರಳ ಆದಿಪುರಾಣ

Author : ಎಲ್. ಬಸವರಾಜು

Pages 528

₹ 300.00




Year of Publication: 2002
Published by: ಅಭಿರುಚಿ ಪ್ರಕಾಶನ
Address: ನಂ- 386, 14ನೇ ಮುಖ್ಯರಸ್ತೆ, 3ನೇ ತಿರುವು, ಸರಸ್ವತಿಪುರಂ, ಮೈಸೂರು- 570009
Phone: 9980560013

Synopsys

‘ಪಂಪನ ಸರಳ ಆದಿಪುರಾಣ’ ಎಲ್‌. ಬಸವರಾಜು ಅವರ ಅಧ್ಯಯನವಾಗಿದೆ. ಪಂಪನ ಬಗ್ಗೆ ಅವರ ಅಧ್ಯಯನವಂತೂ ಅತ್ಯಂತ ಆಳವಾದದ್ದು. ಗ್ರಂಥ ಸಂಪಾದನ-ಸಂಶೋಧನ ಕ್ಷೇತ್ರದಲ್ಲಿ ಅವರ ಶ್ರದ್ಧೆ ಅಪಾರ. ಹಳೆಗನ್ನಡದಲ್ಲಿರುವ ಪಂಪನ ಆದಿಪುರಾಣವನ್ನು ಇಂದಿನ ಕನ್ನಡಿಗರಿಗಾಗಿ ಸಂಧಿ ವಿಂಗಡಿಸಿ ಸರಳಗೊಳಿಸಿ ಓದನ್ನು ಅರ್ಥಪೂರ್ಣವಾಗುವಂತೆ ಈ ಕೃತಿಯಲ್ಲಿ ತಿಳಿಸಲಾಗಿದೆ.

About the Author

ಎಲ್. ಬಸವರಾಜು
(07 October 1919 - 29 January 2012)

ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪ- ತಾಯಿ ಈರಮ್ಮ. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ...

READ MORE

Reviews

ಹೊಸತು- ಜೂನ್‌ -2003

ಹಳೆಗನ್ನಡದ ಕಾವ್ಯಗಳು ಎಲ್ಲ ಮಜಲುಗಳನ್ನು ಎಲ್. ಬಸವರಾಜು ಅವರಷ್ಟು ಜಾಲಾಡಿದ ಮಹನೀಯರು ತುಂಬ ವಿರಳ. ಪಂಪನ ಬಗ್ಗೆ ಅವರ ಅಧ್ಯಯನವಂತೂ ಅತ್ಯಂತ ಆಳವಾದದ್ದು. ಗ್ರಂಥ ಸಂಪಾದನ-ಸಂಶೋಧನ ಕ್ಷೇತ್ರದಲ್ಲಿ ಅವರ ಶ್ರದ್ಧೆ ಅಪಾರ. ಹಳೆಗನ್ನಡದಲ್ಲಿರುವ ಪಂಪನ ಆದಿಪುರಾಣವನ್ನು ಇಂದಿನ ಕನ್ನಡಿಗರಿಗಾಗಿ ಸಂಧಿ ವಿಂಗಡಿಸಿ ಸರಳಗೊಳಿಸಿ ಓದನ್ನು ಅರ್ಥಪೂರ್ಣವಾಗುವಂತೆ ಇಲ್ಲಿ ರೂಪಿಸಿದ್ದಾರೆ. ಪ್ರಾಚೀನ ಚಂಪೂಕಾವ್ಯವನ್ನು ಅಭ್ಯಾಸ ಮಾಡುವವರಿಗೆ ಒಂದು ಸುವರ್ಣಾವಕಾಶ.

Related Books