ತುಳುನಾಡು

Author : ಪಿ. ಗುರುರಾಜಭಟ್

Pages 273

₹ 5.00




Year of Publication: 1963
Published by: ಕೆ. ಲಕ್ಷ್ಮೀನಾರಾಯಣ ಭಟ್
Address: ‌ ಪಡುಪೇಟೆ, ಉಡುಪಿ.

Synopsys

ʼತುಳುನಾಡುʼ ಒಂದು ಸಂಶೋಧನಾತ್ಮಕ ಗ್ರಂಥ. ಲೇಖಕ ಪಿ. ಗುರುರಾಜ್‌ ಭಟ್‌ ಅವರಿಂದ ರಚಿತವಾಗಿದೆ. ಈ ಕೃತಿಯಲ್ಲಿ ತುಳುವರೆಂದರೆ ಯಾರು, ತುಳುವರ ಹುಟ್ಟು ಬಗೆಗಿನ ಮಾಹಿತಿಗಳು, ಸ್ವರನಾಮಗಳನ್ನು ಹೇಳುವ ತುಳುನಾಡಿನ ಕಥೆಯನ್ನು ಕೃತಿಯು ಸವಿಸ್ತಾರವಾಗಿ ಹೇಳುತ್ತದೆ.

ತುಳುನಾಡಿಗೆ ಸಂಬಂಧಿಸಿದ ಕೆಲವು ಮುಖ್ಯವಾದ ದಾಖಲೆಗಳನ್ನು ಒಳಗೊಂಡಿದೆ. ದಕ್ಷಿಣ ಕನ್ನಡದಲ್ಲಿ ತುಳುವರ ವಿಚಾರಧಾರೆಗಳು ಮತ್ತು ಬಂಟ ಸಮುದಾಯದ ಅಚಾರ -ವಿಚಾರಗಳ ಕುರಿತು ಕೃತಿಯಲ್ಲಿ ವಿವರಿಸಲಾಗಿದೆ. ತುಳುನಾಡಿನ ಭೌಗೋಳಿಕ ಸ್ಥಿತಿಗತಿ, ತುಳುನಾಡಿನ ರಾಜಕೀಯ ಚರಿತ್ರೆ,ತುಳುನಾಡಿನ ದೇವಾಲಯಗಳ ಇತಿಹಾಸ ಮತ್ತು ತುಳುನಾಡಿನ ಕಲೆಗಳ ಬಗೆಗೆ ಕೃತಿಯಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ.

About the Author

ಪಿ. ಗುರುರಾಜಭಟ್
(15 June 1924 - 27 August 1978)

ಲೇಖಕ ಪಿ. ಗುರುರಾಜಭಟ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ ಪಾದೂರಿನವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಾದೂರು ಮತ್ತು ಉಡುಪಿಯಲ್ಲಿ ಪೂರ್ಣಗೊಳಿಸಿದ ಅವರು ಪದವೀಧರರು. ಕಾರ್ಕಳದ ಅತ್ತೂರು ಪ್ರಾಥಮಿಕ ಶಾಲೆ ಮತ್ತು ಮೂಡಬಿದರೆಯ ಜೈನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿದರು, 1952ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ, 1953ರಲ್ಲಿ ಶೈಕ್ಷಣಿಕ ತರಬೇತಿ ಹಾಗೂ 1956ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. (ಇತಿಹಾಸ) ಪದವಿ ಪಡೆದರು. “ತುಳುನಾಡಿನ ರಾಜಕೀಯ ಮತ್ತು ಸಂಸ್ಕೃತಿ ಚರಿತ್ರೆ ಆದಿಕಾಲದಿಂದ ಕ್ರಿ.ಶ.600ರವರೆಗೆ ” ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಅವರು  ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ...

READ MORE

Related Books