ಕನ್ನಡ ಗೀತನಾಟಕಗಳ ಅಧ್ಯಯನ

Author : ವಿಜಯಾ ಸುಬ್ಬರಾಜ್

Pages 494

₹ 60.00




Year of Publication: 1995
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು

Synopsys

ಪ್ರಾದೇಶಿಕ ರಂಗ ಪರಂಪರೆಯ ವೈಶಿಷ್ಟ್ಯಗಳ ತೌಲನಿಕ ವಿವೇಚನೆ, ಗೀತ ನಾಟಕ ಹಾಗೂ ಸಂಗೀತದ ನಡುವಿನ ಸಂಬಂಧದ ಕುರಿತು ಈ ಕೃತಿಯು ಚರ್ಚಿಸಿದೆ.

ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ಗೀತನಾಟಕಗಳ ಬೆಳವಣಿಗೆ, ಧಾರ್ಮಿಕ ಹಿನ್ನೆಲೆ, ಭಕ್ತಿ ಪರಂಪರೆ, ಗೀತನಾಟಕಗಳ ಸಾಹಿತ್ಯಗುಣ, ಜಾನಪದ ರಂಗಭೂಮಿ; ರಂಗ ಪ್ರಯೋಗ, ಪರಿಣಾಮ ಮುಂತಾದ ವಿಷಯಗಳ - ವಿವೇಚನೆ ವಿವರಣೆಗಳನ್ನು ಕೃತಿಯಲ್ಲಿ ನೀಡಲಾಗಿದೆ.

 

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books