ಕನಕದಾಸರ ಸಾಹಿತ್ಯ ದರ್ಶನ

Author : ಜಗನ್ನಾಥ ಆರ್. ಗೇನಣ್ಣವರ

Pages 78

₹ 50.00




Year of Publication: 2015
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಕಾಗಿನೆಲೆ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
Phone: 08375-289388

Synopsys

ಕನಕದಾಸರ ಸಾಹಿತ್ಯ ದರ್ಶನ ಜಗನ್ನಾಥ. ಆರ್‌. ಗೇನಣ್ಣವರ ಕೃತಿಯಾಗಿದೆ. ಮಾಯೆ ಮಾನವನ ಬಹುದೊಡ್ಡ ಶತ್ರು. ಮಾಯೆ ಅಂಧಕಾರದ ಅಮೂರ್ತ ರೂಪ, ಮಾಯೆಯ ಉಗಮಕ್ಕೆ ಯಾರು ಕಾರಣರು ಎಂಬ ಪ್ರಶ್ನೆಯನ್ನು ಹಾಕಿದಾಗ 'ದೈವ' ಎಂಬ ಉತ್ತರ ಹುಟ್ಟುತ್ತದೆ. ಮಾಯೆ ದೈವದೊಳಗೋ ದೈವದೊಳಗೆ ಮಾಯೆಯೋ ವಿವರಿಸಲಾಗದು ದೇಹದೊಳಗೇ ಹರಿಯೋ ಹರಿಯೊಳಗೆ ದೈವವೋ ವಿವರಿಸಲಾಗದು. ಇದು ದೈವ ಮಾಯೆ. ಮತ್ತು ಮಾನವ ಸಂಬಂಧ. ಇದೊಂದು ಅಪೂರ್ವ ಕೀರ್ತನೆಯಾಗಿದೆ. ಸಂಬಂಧಗಳ ನೆಲೆಯಲ್ಲಿ ವಿವರಿಸಲ್ಪಡುವ ಈ ಕೀರ್ತನೆ ವಿಶಿಷ್ಟ ಅನುಭವದ ಅಭಿವ್ಯಕ್ತಿಯಾಗಿದೆ. ''ಕನಕದಾಸರ ಸಾಹಿತ್ಯ ದರ್ಶನ'' ಈ ಕೃತಿ ವಿಶಿಷ್ಟವಾಗಿದೆ. ಹಲವು ನೆಲೆಗಳಲ್ಲಿ ನಿಂತು ಕನಕದಾಸರ ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ಡಿ. ತಂಗರಾಜು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಜಗನ್ನಾಥ ಆರ್. ಗೇನಣ್ಣವರ

ಲೇಖಕ ಜಗನ್ನಾಥ ಆರ್. ಗೇನಣ್ಣವರ ಅವರು ಮೂಲತಃ ಹಾವೇರಿ ಜಿಲ್ಲೆಯ ಕಾಗಿನೆಲೆಯವರು. ಪ್ರಸ್ತುತ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಸಹಾಯಕ ಸಂಶೋಧಕ ಹಾಗೂ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಕನಕದಾಸರ ಸಾಹಿತ್ಯ ದರ್ಶನ, ಸಂತ ಶ್ರೀ ಕನಕದಾಸರ ಜೀವನ ಸಂದೇಶ, ಕನಕ ಕೀರ್ತನ ಕೌಸ್ತುಭ ...

READ MORE

Related Books