
‘ಶಂಕರ ಮೊಕಾಶಿ ಪುಣೇಕರ ಅವರ ಗಂಗವ್ವ ಗಂಗಾಮಾಯಿ’ ಲೇಖಕಿ ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಸಲ್ಲಿಸಿದ ಸಂಪ್ರಬಂಧ. ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಲೇಖಕ ಮೊಕಾಶಿ ಅವರು, ಕಾದಂಬರಿ ಕ್ಷೇತ್ರಕ್ಕೆ ಅವರ ಕಾಣಿಕೆ ಮೂರು. ಪ್ರತೀ ಕಾಣಿಕೆಯೂ ಹೊಸ ಕಾಣ್ಕೆಯೇ. ಪ್ರಸ್ತುತ ಅಧ್ಯಯನಕ್ಕೆ ವಿಷಯವಾದದ್ದು ಅವರ ಮೊದಲ ಕಾದಂಬರಿ 'ಗಂಗವ್ವ ಗಂಗಾಮಾಯಿ'.
1956ರಲ್ಲಿ ಪ್ರಕಟವಾದ ಈ ಕೃತಿಯು 'ಕನ್ನಡದ ಮೊದಲ ಹತ್ತು ಕಾದಂಬರಿಗಳಲ್ಲಿ ಸ್ಥಾನ ಪಡೆಯುವ ಕೃತಿ' ಎಂಬುದು ವಿಮರ್ಶಕರ ಪ್ರಶಂಸೆ. ಅಂದಿನ ವಾದ-ವಿವಾದಗ್ರಸ್ತ ಸಾಹಿತ್ಯಕ ವಾತಾವರಣಕ್ಕೆ ತೀವ್ರ ವಿರೋಧವಾಗಿ ಈ ಕೃತಿ ಹೊರಬಂದು, ಹೀಗೂ ಕೃತಿಯೊಂದನ್ನು ಸೃಷ್ಟಿಸಬಹುದೆಂಬ ವಿಚಾರಕ್ಕೆ ಉಳಿದ ಲೇಖಕರನ್ನು ತಳ್ಳಿತ್ತು. ಭಾಷೆ, ಶೈಲಿ, ತಂತ್ರ ಹಾಗೂ ವಸ್ತುವಿನಲ್ಲಿ ಅನನ್ಯತೆಯನ್ನು ಮೆರೆದ ಈ ಕೃತಿ, ಭಾರತದ ಬಹುತೇಕ ಭಾಷೆಗಳಿಗೂ ತರ್ಜುಮೆಗೊಂಡಿದೆ.
ಕಾದಂಬರಿಯ ವಸ್ತುವಿನ ಆಯ್ಕೆಯಲ್ಲಿ ಸಂಪ್ರದಾಯವನ್ನು ಹಾಗೂ ತಂತ್ರದಲ್ಲಿ ಹೊಸತನವನ್ನು ಅನುಸರಿಸಿದ್ದಾರೆ. ಅದರ ವಿಶಿಷ್ಟ ರೀತಿಯ ವಸ್ತುವೇ ಕಥಾನಕದ ನಡೆಯನ್ನು ನಿರ್ಧರಿಸಿಬಿಟ್ಟಿದೆ. ಇಂತಹ ಮಹತ್ವದ ಕೃತಿಯ ಬಗ್ಗೆ ಸಂಧ್ಯಾ ಹೆಗಡೆ ಸಂಪ್ರಬಂಧ ರಚಿಸಿದ್ದು, ಪ್ರಕಟಿತ ಕೃತಿ ಇದಾಗಿದೆ.
©2025 Book Brahma Private Limited.