ಮೈಸೂರು ನಗರದ ಅಶೋಕಪುರಂ

Author : ವಾಸುದೇವ ಮೂರ್ತಿ

Pages 498

₹ 250.00




Year of Publication: 2004
Published by: ಅಭಿರುಚಿ ಪ್ರಕಾಶನ
Address: ನಂ- 386, 14ನೇ ಮುಖ್ಯರಸ್ತೆ, 3ನೇ ತಿರುವು, ಸರಸ್ವತಿಪುರಂ, ಮೈಸೂರು- 570009
Phone: 9980560013

Synopsys

‘ಮೈಸೂರು ನಗರದ ಅಶೋಕಪುರಂ’ ವಾಸುದೇವಮೂರ್ತಿ ಅವರ ಒಂದು ಜಾನಪದೀಯ ಅಧ್ಯಯನವಾಗಿದೆ. ಹಳೆಯ ಹಾಗೂ ಹೊಸ ತಲೆಮಾರುಗಳ ಕೊಂಡಿಯಂತೆ ಕಾಣುತ್ತಿರುವ ಈ ಚಿಕ್ಕ ಪ್ರದೇಶವೊಂದನ್ನು ತಮ್ಮ ಸಂಶೋಧನಾ ಪ್ರಬಂಧಕ್ಕೆ ವಸ್ತುವನ್ನಾಗಿ ಆಯ್ಕೆ ಮಾಡಿ ಸವಿಸ್ತಾರ ಕ್ಷೇತ್ರ ಕಾರ್ಯ ನಡೆಸಿದ್ದು ಜಾನಪದ ನಂಬಿಕೆಗಳ ಇತಿಹಾಸವೊಂದನ್ನು ಪರಿಚಯಿಸಿದ್ದಾರೆ.

About the Author

ವಾಸುದೇವ ಮೂರ್ತಿ
(25 October 1977)

ಶಿವಮೊಗ್ಗದಲ್ಲಿ ಜನಿಸಿದ ವಾಸುದೇವ ಮೂರ್ತಿ ಅವರು ಸದ್ಯ ಬೆಂಗಳೂರು ನಿವಾಸಿ. ಅನೇಕ ಖ್ಯಾತ ಮಾಸಿಕ, ಪತ್ರಿಕೆಗಳಲ್ಲಿ ನಿಯಮಿತವಾಗಿ ಕತೆಗಳು ಪ್ರಕಟವಾಗಿವೆ. ವೃತ್ತಿಯಿಂದ ಎಂಜಿನಿಯರ್ ಆಗಿರುವ ಅವರು ಪ್ರಸ್ತುತ ಕನಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.. ಪತ್ತೇದಾರಿ ಕತೆಗಳು ಅಪರೂಪ ಆಗಿರುವ ಈ ದಿನಗಳಲ್ಲಿ ಅವರ ಥ್ರಿಲ್ಲರ್ ಮಾದರಿ ಕತೆಗಳು ಮುದ ನೀಡುತ್ತವೆ. ಅಂತೆಯೇ, ಈ ಸಂಕಲನದ ಅನೇಕ ಕತೆಗಳು ಈಗಾಗಲೇ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಸಂಕಲನದ ಕತೆ ’ದಿ ಲಾಸ್ಟ್ ಕೇಸ್ ’ ಕಿರುಚಿತ್ರವಾಗಿ ಮೂಡಿಬರಲಿದೆ. ...

READ MORE

Reviews

ಹೊಸತು - ಮಾರ್ಚ್ -2005

ಅಶೋಕಪುರಂ ಮೈಸೂರು ನಗರದ ಮಧ್ಯೆ ಇರುವ ಹಿಂದೆ ತೀರ ಹಿಂದುಳಿದ ವರ್ಗ ವಾಸಿಸುತ್ತಿದ್ದ ಪ್ರದೇಶ. ಇತ್ತೀಚಿನ ನವನಾಗರಿಕತೆಗೆ ಸ್ವಲ್ಪ ಸ್ವಲ್ಪವೇ ತೆರೆದುಕೊಂಡರೂ ಇನ್ನೂ ಅನೇಕರು ತಮ್ಮ ಕುಲಾಚರಣೆ ಆಚಾರ-ವಿಚಾರಗಳನ್ನು ಸುಲಭದಲ್ಲಿ ಬಿಟ್ಟುಕೊಡಲು ಸಿದ್ಧರಿಲ್ಲ. ಹಳೆಯ ಹಾಗೂ ಹೊಸ ತಲೆಮಾರುಗಳ ಕೊಂಡಿಯಂತೆ ಕಾಣುತ್ತಿರುವ ಈ ಚಿಕ್ಕ ಪ್ರದೇಶವೊಂದನ್ನು ತಮ್ಮ ಸಂಶೋಧನಾ ಪ್ರಬಂಧಕ್ಕೆ ವಸ್ತುವನ್ನಾಗಿ ಆಯ್ಕೆ ಮಾಡಿ ಸವಿಸ್ತಾರ ಕ್ಷೇತ್ರ ಕಾರ್ಯ ನಡೆಸಿದ್ದು ಜಾನಪದ ನಂಬಿಕೆಗಳ ಇತಿಹಾಸವೊಂದನ್ನು ಪರಿಚಯಿಸಿದ್ದಾರೆ. ಪ್ರಾಚೀನ ಕಾಲದ ಹೊಲಗೇರಿಯೆಂದು ಗುರುತಿಸಲಾಗಿದ್ದ ಈ ಪ್ರದೇಶಕ್ಕೆ ಕಳೆದ ಶತಮಾನದಲ್ಲಷ್ಟೇ ಅಶೋಕಪುರಂ ಎಂಬ ನಾಮಕರಣವಾಗಿದ್ದು ಅಲ್ಲಿನ ಜನರ ಆಮೂಲಾಗ್ರ ಪರಿಚಯವನ್ನೇ ಪ್ರಬಂಧದಲ್ಲಿ ಮಂಡಿಸಲಾಗಿದೆ. ಒಂದು ಜನಾಂಗದ ಹಾಗೂ ಗ್ರಾಮೀಣ ಬದುಕಿನ ಪರಿಚಯ.

Related Books