ಮರಾಟಿ ಕುಣಬಿಗಳು

Author : ಸುಮಾ ರಮೇಶ್

Pages 84

₹ 65.00




Year of Publication: 2009
Published by: ಚಕೋರ ಪ್ರಕಾಶನ
Address: ಬೆಂಗಳೂರು

Synopsys

‘ಮರಾಠಿ ಕುಣಬಿಗಳು’ ಕೃತಿಯು ಜೆ.ಕೆ. ರಮೇಶ್ ಅವರ ಸಂಶೋಧನಾ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಉತ್ತರ ಕನ್ನಡದ ಕಾಳಿ ನದಿಯ ದಂಡೆಯಿಂದ ಶರಾವತಿ, ತುಂಗಾ ನದಿಗಳವರೆಗೆ ತಮ್ಮ ವಾಸದ ವ್ಯಾಪ್ತಿಯನ್ನು ಹೊಂದಿರುವ ಮರಾಟಿ ಕುಣಬಿಗಳು ಒಂದು ವಿಶಿಷ್ಟ ಬುಡಕಟ್ಟಾಗಿದೆ. ಮಲೆನಾಡಿನಲ್ಲಿ ಹರಡಿಕೊಂಡಿರುವ ಈ ಬುಡಕಟ್ಟಿನ ಬಗ್ಗೆ ಸೂಕ್ಷ್ಮವಾಗಿ, ವಸ್ತುನಿಷ್ಟವಾಗಿ  ಲೇಖಕರು ಅಧ್ಯಯನ ಮಾಡಿದ್ದಾರೆ. ಮರಾಟಿ ಕುಣಬಿಗಳು ಗಿರಿಜನರು. ಅವರು ಪ್ರಕೃತಿಯನ್ನು ಅವಲಂಬಿಸಿ ಬದುಕುತ್ತಿರುವವರು. ಅವರು ಮಾಡುತ್ತಿರುವ ವ್ಯವಸಾಯ ಕುಮರಿ ಬೇಸಾಯ. ಇದರೊಂದಿಗೆ ಅವರು ಇಲ್ಲಿ ವಲಸೆ ಬಂದು ಕರ್ನಾಟಕದಲ್ಲಿ ನೆಲೆಯಾದವರು. ಇಂಥ ಕಾಡಿನ ಜೀವಿಗಳ ಸಂಪ್ರದಾಯ, ಸಾಮಾಜಿಕ ಕಟ್ಟಳೆಗಳು, ಅದರ ಸ್ವರೂಪ, ಕಲೆ, ಹಾಡು ಹಿನ್ನೆಲೆ ಇವನ್ನೆಲ್ಲ ದಾಖಲಿಸಿದ್ದಾರೆ . ಮಾತ್ರವಲ್ಲ; ಲೇಖಕರು, ವಲಸೆ ಬರಲು ಇದ್ದ ಐತಿಹಾಸಿಕ ಕಾರಣಗಳನ್ನು ದಾಖಲಿಸಿದ್ದಾರೆ. ಮನೆ ಮಾತು ಮರಾಠಿಯಾದರೂ ಅವರು ಹೆಚ್ಚಾಗಿ ಬಳಸುವುದು ಕನ್ನಡವನ್ನು. ಇಂಥ ಗಿರಿಜನ ವಾಸಿಗಳ ಬಗ್ಗೆ ದಟ್ಟ ಚಿತ್ರವನ್ನು ಲೇಖಕರು ನೀಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಅವರ ಜಾನಪದ ಹಾಡುಗಳನ್ನು ಕೂಡ ನೀಡಲಾಗಿದೆ. ಅವುಗಳು ಬಹಳಷ್ಟು ಮರಾಠಿಯಲ್ಲಿದ್ದರೆ, ಕೆಲವು ಮಾತ್ರ ಕನ್ನಡದಲ್ಲಿವೆ. ಮರಾಠಿ ಹಾಡುಗಳ ಅನುವಾದವನ್ನು ಕೊಟ್ಟಿದ್ದರೆ ಈ ಪುಸ್ತಕದ ಉಪಯುಕ್ತತೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಇಲ್ಲಿನ ಒಂದು ಕೋಲಾಟದ ಹಾಡು ಅರ್ಥಪೂರ್ಣವಾಗಿದೆ. ‘ದಾಸ ಬಣ್ಣದ ಹೂವ ತಂದೆ ನಾನು ದಾಸ ಬಣ್ಣದ ಹೂವ ತಂದೆ ಹೂವ ಮುಡಿವಾ ಜನರಲ್ಲೋ ನಾವು ಹೂವ ಮುಡಿವ ಜನರಲ್ಲಾ’ ಎಂದು ಈ ಕೃತಿಯಲ್ಲಿ ವಿಶ್ಲೇಷಿತವಾಗಿದೆ.

 

About the Author

ಸುಮಾ ರಮೇಶ್

ಸುಮಾ ರಮೇಶ್ ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹಾಸನದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿ, ಚಿಕ್ಕಮಗಳೂರಿನ ಮೌಂಟೇನ್ ವ್ಯೂ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಬ್ಯಾಸ ಹೈಸ್ಕೂಲು ಶಿಕ್ಷಣವನ್ನು ಪಡೆದರು. ಹಾಸನದ ಮಹಿಳಾ ಪಾಲಿಟೆಕ್ನಿಕ್ ನಲ್ಲಿ ಕಮರ್ಶಿಯಲ್ ಪ್ರ್ಯಾಕ್ಟೀಸ್ ಡಿಪ್ಲೊಮಾ ಪಡೆದಿದ್ದು, ಎ ವಿ ಕಾಂತಮ್ಮ ಕಾಲೇಜು, ಹಾಸನದಲ್ಲಿ ಬಿ.ಕಾಂ.ಪದವಿ ಪಡೆದರು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿಶೇಷ ಆಸಕ್ತಿ ಹೊಂದಿರುವ ಸುಮಾ ರಮೇಶ್ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಚದುರಂಗ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದವರು. ಶಿಕ್ಷಕಿ ಹಾಗು ಮುಖ್ಯ ಶಿಕ್ಷಕಿಯಾಗಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಗೃಹಿಣಿಯಾಗಿ ನೆಲೆಸಿರುವುದು ...

READ MORE

Related Books