ಎಸ್‌. ನಿಜಲಿಂಗಪ್ಪ ಒಂದು ಅಧ್ಯಯನ

Author : ಕೋ. ಚೆನ್ನಬಸಪ್ಪ

Pages 238

₹ 125.00




Year of Publication: 2001
Published by: ಲೋಹಿಯಾ ಪ್ರಕಾಶನ
Address: ಕಪ್ಪುಗಲ್ಲು ರಸ್ತೆ, ಬಳ್ಳಾರಿ

Synopsys

`ಎಸ್‌. ನಿಜಲಿಂಗಪ್ಪ ಒಂದು ಅಧ್ಯಯನ’ ಕೋ.ಚೆನ್ನಬಸಪ್ಪ ಅವರ ಅಧ್ಯಯನ ಕೃತಿಯಾಗಿದೆ. ಹಳೆಯ ಕಾಂಗ್ರೆಸಿಗ, ನಿಷ್ಠುವಂತ ರಾಜಕೀಯ ಧುರೀಣ, ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರ ಕುರಿತಾದ ಒಂದು ಅಧ್ಯಯನವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

About the Author

ಕೋ. ಚೆನ್ನಬಸಪ್ಪ
(27 February 1922 - 23 February 2019)

ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...

READ MORE

Reviews

ಹೊಸತು-2002- ಫೆಬ್ರವರಿ

ಹಳೆಯ ಕಾಂಗ್ರೆಸಿಗ, ನಿಷ್ಠಾವಂತ ರಾಜಕೀಯ ಧುರೀಣ, ಏಕೀಕೃತ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರ ಕುರಿತಾದ ಒಂದು ಅಧ್ಯಯನ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರವಹಿಸಿ ವಿವಿಧ ರಾಜಕೀಯ ಹುದ್ದೆಗಳನ್ನಲಂಕರಿಸಿದ ಅವರ ವ್ಯಕ್ತಿತ್ವ ಆಡಂಬರರಹಿತವಾದುದು. ಅವರೊಂದಿಗೆ ಐವತ್ತು ವರ್ಷಗಳ ಸುದೀರ್ಘ ಒಡನಾಟವಿದ್ದ ಶ್ರೀ ಕೋ. ಚೆನ್ನಬಸಪ್ಪ ತಮ್ಮ ಲೇಖನಿಯಿಂದ ನಿಜಲಿಂಗಪ್ಪನವರ ಧೀಮಂತ ವ್ಯಕ್ತಿತ್ವದ ಪರಿಚಯ ನೀಡುತ್ತಾರೆ.

Related Books