ಸಾಹಿತ್ಯ ಮತ್ತು ಸಿದ್ಧಾಂತಗಳು

Author : ರಾಜೇಂದ್ರ ಚೆನ್ನಿ

Pages 112

₹ 100.00




Year of Publication: 2022
Published by: ಅಭಿನವ ಪ್ರಕಾಶನ
Address: 1ನೇ ಹಂತ, ಮರೇನಹಳ್ಳಿ, ವಿಜಯನಗರ, ಬೆಂಗಳೂರು- 560040.

Synopsys

ಸಾಹಿತ್ಯ ಮತ್ತು ಸಿದ್ಧಾಂತಗಳು ಲೇಖನ ಬರಹಗಳ ಪುಸ್ತಕದ ಲೇಖಕರು ರಾಜೇಂದ್ರ ಚೆನ್ನಿ. ಈ ಕೃತಿಯಲ್ಲಿ ನಾವು ಸಿದ್ಧಾಂತಗಳನ್ನು ಏಕೆ ಚರ್ಚೆ ಮಾಡಬೇಕು?, ಎಂದು ಕೇಳಿದರೆ ಅದಕ್ಕೆ ಉತ್ತರ : ಇಪ್ಪತ್ತನೇ ಶತಮಾನದ ಜಗತ್ತು ಎಂದೂ ಕಂಡರಿಯದ ಹಿಂಸೆಯ ಇತಿಹಾಸ. ಈ ಇತಿಹಾಸವು ಸೈದ್ಧಾಂತಿಕ ಹಿಂಸೆಯ ಭೀಕರವಾದ ಇತಿಹಾಸವಾಗಿದೆ. ಮನುಷ್ಯ ನಾಗರೀಕತೆಯ ಇತಿಹಾಸದಲ್ಲಿ ಹಿಂಸೆಯು ಸ್ಥಾಯಿಯಾಗಿದೆ ಎನ್ನುವುದು ನಿಜವಾದರೂ, ಇಪ್ಪತ್ತನೆಯ ಶತಮಾನದ ವಿಶಿಷ್ಟವಾದ ಹಿಂಸೆಯು ಭೀಕರವಾದ ಇತಿಹಾಸವಾಗಿದೆ. ಮನುಷ್ಯ ನಾಗರೀಕತೆಯ ಇತಿಹಾಸದಲ್ಲಿ ಹಿಂಸೆಯು ಸ್ಥಾಯಿಯಾಗಿದೆ ಎನ್ನುವುದು ನಿಜವಾದರೂ, ಇವುಗಳಲ್ಲಿ ಮುಖ್ಯವಾದುದು ನಾಝಿವಾದ, ಫ್ಯಾಸಿಸಮ್‌ ಮತ್ತು ಸರ್ವಾಧಿಕಾರವಾದ- ಇವುಗಳು ಎರಡು ಮಹಾಯುದ್ಧಗಳಿಗೆ ಕಾರಣವಾದವು ಎಂದು ಕೃತಿಯ ಬೆನ್ನುಡಿಯಲ್ಲಿ ಕೃತಿಯೊಳಗಿನ ಮುಖ್ಯ ನೆಲೆಯನ್ನು ವರ್ಣಿಸಲಾಗಿದೆ.

About the Author

ರಾಜೇಂದ್ರ ಚೆನ್ನಿ
(21 October 1955)

ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...

READ MORE

Related Books