ಶಾಸನ ಮಂಥನ

Author : ಪಿ.ವಿ.ಕೃಷ್ಣಮೂರ್ತಿ

Pages 360

₹ 200.00




Year of Publication: 2011
Published by: ತುಮಕೂರು ವಿಶ್ವವಿದ್ಯಾನಿಲಯ
Address: ತುಮಕೂರು

Synopsys

‘ಶಾಸನ ಮಂಥನ’ ಡಾ. ಪಿ.ವಿ. ಕೃಷ್ಣಮೂರ್ತಿ ಅವರ ಸಂಶೋಧನಾ ಅಧ್ಯಯನಾತ್ಮಕ ಲೇಖನಗಳ ಸಂಗ್ರಹ ಕೃತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕನ್ನಡ ಭಾಷಾಭಿವೃದ್ಧಿ ಯೋಜನೆಯಡಿ ಈ ಕೃತಿ ಪ್ರಕಟಗೊಂಡಿದೆ. ಶಾಸನಗಳ ಅಧ್ಯಯನಕ್ಕೆ ಈ ಕೃತಿಯು ಪೂರಕ ಮಾಹಿತಿ ನೀಡುತ್ತಿದ್ದು, ಶಾಸನ ಸಂಶೋಧನಾ ವಿದ್ಯಾರ್ಥಿಗಳಿಗೆ, ಬೋಧಕರಿಗೆ ಉಪಯುಕ್ತವಾಗಿದೆ. 

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books