ಚರ್ಚಿತ ವಿದೇಶಿ ಕ್ಲಾಸಿಕ್ ಮತ್ತು ವ್ಯಂಗ ಕಥೆಗಳು

Author : ಡಿ.ಎನ್‌. ಶ್ರೀನಾಥ್‌

Pages 216

₹ 150.00




Year of Publication: 2017
Published by: ಕಣ್ವ ಪ್ರತಿಷ್ಠಾನ
Address: ಬೆಂಗಳೂರು

Synopsys

ಖ್ಯಾತ ಅನುವಾದಕ-ಲೇಖಕ ಡಿ.ಎನ್. ಶ್ರೀನಾಥ್ ಅವರು ಬಹುಭಾಷೀಯ ಉತ್ತಮ ಹಾಗೂ ಬಹುಚರ್ಚಿತ ಕಥೆಗಳನ್ನು ಆಯ್ದುಕೊಂಡು ಅವುಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ-ಚರ್ಚಿತ ವಿದೇಶಿ ಕ್ಲಾಸಿಕ್ ಮತ್ತು ವ್ಯಂಗ್ಯ ಕಥೆಗಳು. ಆಯ್ದ ಕಥೆಗಳು ಸಾಹಿತ್ಯವಲಯದಲ್ಲಿ ಹೇಗೆ ಬಹುಚರ್ಚಿತವಾದವು ಎಂಬ ವಿಚಾರದ ಹಿನ್ನೆಲೆಯಲ್ಲಿ ಅಂತಹ ಕಥೆಗಳನ್ನು ಆಯ್ದು, ಅನುವಾದಿಸಿದ್ದು ಇಲ್ಲಿಯ ವಿಶೇಷ.

About the Author

ಡಿ.ಎನ್‌. ಶ್ರೀನಾಥ್‌
(03 December 1950)

ಅನುವಾದಕ ಶ್ರೀನಾಥ್‌ ಅವರು ಹುಟ್ಟಿದ್ದು 1950 ಡಿಸೆಂಬರ್‌ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್‌, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ"  ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...

READ MORE

Related Books