
ನಿವೃತ್ತ ಪೊಲೀಸ್, ಶೌರ್ಯ ಪ್ರಶಸ್ತಿ ವಿಜೇತ, ಲೇಖಕ ಮ್ಯಾಕ್ಸ್‌ವೆಲ್ ಪೆರೇರಾ ಅವರ ʻದಿ ತಂದೂರ್ ಮರ್ಡರ್ʼ ಕೃತಿಯ ಕನ್ನಡ ಅನುವಾದ ʻತಂದೂರ್ ಮರ್ಡರ್ʼ. ಲೇಖಕ ಡಿ.ವಿ. ಗುರುಪ್ರಸಾದ್ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇದೊಂದು ನೈಜ ಘಟನೆಯಾಧಾರಿತ ಕೃತಿಯಾಗಿದ್ದು, ದೇಶವನ್ನು ಬೆಚ್ಚಿಬೀಳಿಸಿದ ನೈನಾ ಸಾಹ್ನಿಸ್ ಹತ್ಯೆ ಸುತ್ತ ನಡೆದ ವಿಚಾರಗಳನ್ನು ಪುಸ್ತಕ ವಿವರಿಸುತ್ತದೆ. 1995ರಲ್ಲಿ ಯುವ ರಾಜಕಾರಣಿಯಾಗಿದ್ದ ಸುಶೀಲ್ ಶರ್ಮಾ ತನ್ನ ಹೆಂಡತಿ ನೈನಾಳನ್ನು ಗುಂಡಿಕ್ಕಿ ಕೊಂದು, ನಂತರ ಶವವನ್ನು ಕತ್ತರಿಸಿ ದೆಹಲಿಯ ಹೃದಯಭಾಗದಲ್ಲಿರುವ ಅಶೋಕ್ ಯಾತ್ರಿ ನಿವಾಸ್ ರೆಸ್ಟೋರೆಂಟ್‌ನಲ್ಲಿ ಸುಟ್ಟುಹಾಕಿದ್ದ. ಹೆಂಡತಿಯ ಅನೈತಿಕ ಸಂಬಂಧದ ಮೇಲೆ ಹುಟ್ಟಿದ ಅನುಮಾನವೇ ಇದಕ್ಕೆಲ್ಲಾ ಕಾರಣ. ಕೊಲೆಯಾದ ರಾತ್ರಿ ನಿಜಕ್ಕೂ ಏನಾಯಿತು? ಆರೋಪಿ ಸುಶೀಲ್ ಶರ್ಮಾನಿಗೆ ವಿಧಿಸಿದ್ದ ಒಂದು ದಶಕಕ್ಕೂ ಹೆಚ್ಚು ಕಾಲದ ಶಿಕ್ಷೆಯನ್ನು ತಡೆಯುವಲ್ಲಿ ಹೇಗೆ ಯಶಸ್ವಿಯಾದರು? ಪ್ರಕರಣದ ತಿರುವುಗಳೇನು? ಹಾಗೂ ತನಿಖೆ ಹೇಗೆ ಅರ್ಧದಲ್ಲೇ ಉಳಿದುಬಿಟ್ಟಿತು? ಈ ಎಲ್ಲಾ ನಿಗೂಢ ವಿಚಾರಗಳನ್ನು, ಘಟನೆಯ ಆಂತರಿಕ ವಿವರಗಳನ್ನು ತನಿಖಾ ವರದಿಗಳು, ಮಾಧ್ಯಮಗಳಲ್ಲಿ ಪ್ರಕಟವಾದ ಅನೇಕ ಕತೆಗಳ ಆಧಾರದ ಮೇಲೆ ಲೇಖಕರು ನೀಡುತ್ತಾ ಹೋಗುತ್ತಾರೆ.
©2025 Book Brahma Private Limited.