ಕಜಾಕರು (ನೀಳ್ಗತೆ)

Author : ಎಚ್.ಎಸ್. ಹರಿಶಂಕರ್

Pages 252

₹ 260.00




Year of Publication: 2021
Published by: ಮಹರ್ಷಿ ಪ್ರಕಾಶನ
Address: ಬೆಂಗಳೂರು
Phone: 9448759815

Synopsys

‘ಕಜಾಕರು ’ ಕೃತಿಯು ಲೆವ್ ತೊಲ್ ಸ್ತೋಯ್ ಅವರ ಕಜಕಿ ಅನುವಾದಿತ ಕೃತಿಯಾಗಿದೆ. ಕನ್ನಡಕ್ಕೆ ಎಚ್. ಎಸ್. ಹರಿಶಂಕರ್ ಅವರು ಅನುವಾದಿಸಿದ್ದು, ಲೇಖಕರು ಇದನ್ನು ನೀಳ್ಗತೆ ಎಂದು ಕರೆದಿದ್ದರೂ ಗಾತ್ರದಲ್ಲಿ ಕಾದಂಬರಿಯ ಸ್ವರೂಪವನ್ನೇ ಪಡೆದುಕೊಂಡಿದೆ. ರಷ್ಯನ್ ಮತ್ತು ಉಕ್ರೇನ್‌ನ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಕಜಾಕರ ಕಥೆ ಇದಾಗಿದೆ.

ಸೀಸರ್ ನದಿಯ ಕೆಳದಂಡೆ ದಾನ್ ಮತ್ತು ತೇರಿಕ್ ಮುಖಜ ಭೂಮಿ ಅವರ ನೆಲೆಯಾಗಿತ್ತು. ಕಥಾನಾಯಕ ಒಲೇನಿನ್, ಕಜಾಕರ ಹಳ್ಳಿಯಲ್ಲಿ ನೆಲೆಸಿದಾಗ ಅವನು ಆ ಸಮುದಾಯದ ಯುವತಿ ಮರ್ಯಾಳ ಮೇಲೆ ಮೋಹಿತನಾಗುತ್ತಾನೆ. ಇವರಿಬ್ಬರ ಪ್ರೇಮದ ಸುತ್ತ ಬೆಳೆಯುತ್ತಾ ಹೋಗುವ ಕಥೆ ಕಜಾಕರ ಸಂಸ್ಕೃತಿ, ಸಂಪ್ರದಾಯಗಳನ್ನೂ ಅನಾವರಣಗೊಳಿಸುತ್ತಾ ಹೋಗುತ್ತದೆ. ಕಥೆಯ ಅಂತ್ಯ ಸದಾ ಮನಸ್ಸಿನಲ್ಲಿ ಉಳಿದು ಕಾಡುವಂತಿದೆ. ಪ್ರಕೃತಿಯ ವರ್ಣನೆ, ವಿವರಗಳಂತೂ ಬಲು ಅನನ್ಯವಾಗಿವೆ.

About the Author

ಎಚ್.ಎಸ್. ಹರಿಶಂಕರ್
(08 December 1940)

ಲೇಖಕರಾಗಿ, ಉತ್ತಮ ಭಾಷಾಂತರಕಾರರಾಗಿ ಅದರಲ್ಲೂ ರಷ್ಯನ್ ಭಾಷೆಯಲ್ಲಿ ಪ್ರಭುತ್ವಸಾಧಿಸಿ, ನೇರವಾಗಿ ರಷ್ಯನ್ ಭಾಷೆಯಿಂದಲೇ ಹಲವಾರು ರಷ್ಯನ್ ಕೃತಿಗಳನ್ನು ಅನುವಾದಿಸಿ ಕನ್ನಡಿಗರಿಗೆ ನೀಡಿರುವ ಹರಿಶಂಕರರು ಹುಟ್ಟಿದ್ದು ಹರಿಹರದಲ್ಲಿ. ತಂದೆ ಪ್ರಸಿದ್ಧ ಸಾಹಿತಿಗಳು, ಶಾರದಾಮಂದಿರದ ಪ್ರಕಾಶಕರೂ ಆದ ಎಚ್.ಎಂ. ಶಂಕರನಾರಾಯಣ ರಾಯರು, ತಾಯಿ ಲಕ್ಷ್ಮೀ ದೇವಮ್ಮ. ಹರಿಹರದಲ್ಲಿ ಪ್ರಾರಂಭಿಕ ಶಿಕ್ಷಣ, ದಾವಣಗೆರೆಯ ಡಿ.ಆರ್.ಎಂ ಕಾಲೇಜಿನಲ್ಲಿ. ಇಂಟರ್‌ಮೀಡಿಯಟ್, ಸೀನಿಯರ್ ಇಂಟರ್‌ಮೀಡಿಯಟ್ ಹಾಗೂ ಪದವಿಗಾಗಿ ಓದಿದ್ದು ಮೈಸೂರಿನ ಯುವರಾಜ ಕಾಲೇಜು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆ, ಎಂ.ಎ.ಪದವಿಗಳು ಮತ್ತು ಎಂ.ಫಿಲ್ (ಭಾಷಾಂತರ) ಮೈಸೂರು ವಿಶ್ವವಿದ್ಯಾಲಯ; ಡಿಪ್ಲೊಮ ...

READ MORE

Reviews

’ಕಜಾಕರು’ ಕೃತಿಯ ವಿಮರ್ಶೆ

ಕಜಾಕರ ಸಂಸ್ಕೃತಿಯ ದರ್ಶನ

ಮೂರು ದಶಕಗಳ ಕಾಲ ರಷ್ಯಾದಲ್ಲಿ ನೆಲೆಸಿದ್ದ ಕನ್ನಡದ ಲೇಖಕ ಪ್ರೊ.ಎಚ್.ಎಸ್. ಹರಿಶಂಕರ್ ಅವರು ಲೆವ್ ತೊಲ್‌ಸ್ತೋಮ್ (ಲಿಯೊ ಟಾಲ್‌ಸ್ಟಾಯ್) ಅವರ 'ಕಜಕಿ' (The Cossacks) ಕೃತಿಯನ್ನು ನೇರವಾಗಿ ರಷ್ಯನ್ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಅನನ್ಯ ಕೃತಿ 'ಕಜಾಕರು', ಲೇಖಕರು ಇದನ್ನು ನೀಳ್ಗತೆ ಎಂದು ಕರೆದಿದ್ದರೂ ಗಾತ್ರದಲ್ಲಿ ಕಾದಂಬರಿಯ ಸ್ವರೂಪವನ್ನೇ ಪಡೆದುಕೊಂಡಿದೆ. ರಷ್ಯನ್ ಮತ್ತು ಉಕ್ರೇನ್‌ನ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಕಜಾಕರ ಕಥೆ ಇದು. ಸೀಸರ್ ನದಿಯ ಕೆಳದಂಡೆ ದಾನ್ ಮತ್ತು ತೇರಿಕ್ ಮುಖಜ ಭೂಮಿ ಅವರ ನೆಲೆಯಾಗಿತ್ತು.

ಕಥಾನಾಯಕ ಒಲೇನಿನ್, ಕಜಾಕರ ಹಳ್ಳಿಯಲ್ಲಿ ನೆಲೆಸಿದಾಗ ಅವನು ಆ ಸಮುದಾಯದ ಯುವತಿ ಮರ್ಯಾಳ ಮೇಲೆ ಮೋಹಿತನಾಗುತ್ತಾನೆ. ಇವರಿಬ್ಬರ ಪ್ರೇಮದ ಸುತ್ತ ಬೆಳೆಯುತ್ತಾ ಹೋಗುವ ಕಥೆ ಕಜಾಕರ ಸಂಸ್ಕೃತಿ, ಸಂಪ್ರದಾಯ ಗಳನ್ನೂ ಅನಾವರಣಗೊಳಿಸುತ್ತಾ ಹೋಗುತ್ತದೆ. ಕಥೆಯ ಅಂತ್ಯ ಸದಾ ಮನಸ್ಸಿನಲ್ಲಿ ಉಳಿದು, ಕಾಡುವಂತಿದೆ. ಕೃತಿಯಲ್ಲಿ ಬರುವ ಪ್ರಕೃತಿಯ ವರ್ಣನೆ, ವಿವರಗಳಂತೂ ಬಲು ಅನನ್ಯವಾಗಿವೆ. ಒಂದರ್ಥದಲ್ಲಿ ಇದು ಟಾಲ್‌ಸ್ಟಾಯ್ ಅವರ ಆತ್ಮಕಥೆಯೇ ಇರಬಹುದೆಂದು ಹಲವು ವಿಮರ್ಶಕರು ಅಭಿಪ್ರಾಯಪಟ್ಟಿರುವುದು ಇಲ್ಲಿ ಉಲ್ಲೇಖನಾರ್ಹ ಸಂಗತಿ. 'ಸತ್ಯಾಸತ್ಯಗಳು ಏನೇ ಇದ್ದರೂ ಟಾಲ್‌ಸ್ಟಾಯ್ ಅವರು ಕಜಾಕರೊಡನೆ ಹಲವಾರು ತಿಂಗಳು ಕಳೆದಿರುವುದು ಐತಿಹಾಸಿಕ ಸತ್ಯ' ಎಂದು ಅನುವಾದಕರು ಹೇಳಿದ್ದಾರೆ.

ರಷ್ಯಾದಲ್ಲಿ ಅವರಿಗೆ ಸಿಕ್ಕಿರಬಹುದಾದ ಟಾಲ್‌ಸ್ಟಾಯ್ ಕುರಿತ ಅಗಾಧ ಸಾಹಿತ್ಯದ ಓದಿನಿಂದ ಲೇಕಕರಿಗೆ ಈ ಮಾಹಿತಿ ಹಂಚಿಕೊಂಡಿರಲಿಕ್ಕೆ ಸಾಕು. ರಷ್ಯನ್‌ನಿಂದ ನೇರವಾಗಿ ಬಂದಿದ್ದರೂ ಭಾಷೆಯ ಮಿತಿಗಳಾವುವೂ ಕಾಡದೇ ಸುಲಲಿತವಾಗಿ ಕನ್ನಡಕ್ಕೆ ದಾಟಿಕೊಂಡು ಬಂದಿದೆ.

(ಕೃಪೆ: ಪ್ರಜಾವಾಣಿ)

Related Books