ಮೋಹನದಾಸ

Author : ಆರ್.ಪಿ. ಹೆಗಡೆ

Pages 108

₹ 50.00




Published by: ಲೋಹಿಯಾ ಪ್ರಕಾಶನ
Address: `ಕ್ಷಿತಿಜ', ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ-583103
Phone: 08392257412

Synopsys

'ಮೋಹನದಾಸʼನೀಳ್ಗತೆಯು ಕನ್ನಡಕ್ಕೆ ಅನುವಾದಿಸಿದ ಕೃತಿಯಾಗಿದ್ದು ಉದಯ ಪ್ರಕಾಶ್‌ ಅವರು ರಚಿಸಿದ್ದು ಇದರ ಕನ್ನಡನುವಾದವನ್ನು ಆರ್.ಪಿ. ಹೆಗಡೆ ಮಾಡಿದ್ದಾರೆ. ಇಲ್ಲಿ ಮನುಷ್ಯ ವರ್ತನೆಯ ದ್ವಂದ್ವ, ಗೊಂದಲ, ಮುಗ್ಧತೆ, ಕ್ರೌರ್ಯಗಳನ್ನು ಒಂದೆಡೆ ಸೇರಿಸುತ್ತಾ ಅದಕ್ಕೆಲ್ಲ ಮೂಲವಾಗಬಲ್ಲ ಕ್ಷಣಿಕ ಅಸಡ್ಡೆ, ಬೇಜವಾಬ್ದಾರಿತನ, ಆತುರಗಳ ದುರಂತವನ್ನು ಇಲ್ಕಲಿನ ಕತೆಗಳಲ್ಲಿ ವರ್ಣಿಸಲಾಗಿದೆ. ಇದೊಂದು ಸಾಮಾನ್ಯ ದಲಿತನ ಕಥೆಯಾಗಿದ್ದು ಆತ ಸಮಾಜದಲ್ಲಿ ಅನುಭವಿಸುವ ನೋವು ನಲಿವುಗಳನ್ನು ಇಲ್ಲಿ ಲೇಖಕರು ಕತೆಯ ಮುಖೇನ ಚಿತ್ರಿಸಿದ್ದಾರೆ. ಓಡಾಡುವ ಜೀವಂತ ವ್ಯಕ್ತಿಯೊಂದು ತಾನು ಸತ್ತಿಲ್ಲ ಎನ್ನುವುದನ್ನು ಸಾಬೀತು ಪಡಿಸಬೇಕಾಗಿ ಬಂದ ಕಠಿಣವಾದ ಸಂಗತಿಯ ಸುತ್ತ ಈ ಕತೆಯು ಸಾಗುತ್ತದೆ.

About the Author

ಆರ್.ಪಿ. ಹೆಗಡೆ - 29 January 2019)

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...

READ MORE

Related Books