ಕಥಾ ಸರಿತ್ಸಾಗರ (ಸಂಪುಟ-3) (ಲಂಬಕಗಳು: ನರವಾಹನದತ್ತಜನನ, ಚರ್ತುದಾರಿಕಾ)

Author : ಹೆಚ್.ವಿ. ನಾಗರಾಜರಾವ್

Pages 242

₹ 80.00
Year of Publication: 2007
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಮೂಲದ ನರವಾಹನದತ್ತ ಜನನ ಮತ್ತು ಚತುರ್ದಾರಿಕಾ ಎಂಬೆರಡು ಲಂಬಕಗಳ ಅನುವಾದವನ್ನು ವಿದ್ವಾಂಸ ಎಚ್.ವಿ. ನಾಗರಜರಾವ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ದೇವದತ್ತ, ಪಿಂಗಳಿಕೆ, ಜೀಮೂತವಾಹನನ ಇಂದಿನ ಮತ್ತು ಹಿಂದಿನ ಜನ್ಮಗಳು, ಕದ್ರೂ ವಿನತೆಯರು, ಅಶೋಕದತ್ತ, ಬಿಂದು ರೇಖೆಯರ ಕಥೆಗಳನ್ನು ಇದು ತನ್ನ ಆರು ತರಂಗಗಳಲ್ಲಿ ಹಿಡಿದಿಟ್ಟುಕೊಂಡಿದೆ. ಇವುಗಳ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ಧಾರೆ.

About the Author

ಹೆಚ್.ವಿ. ನಾಗರಾಜರಾವ್
(10 September 1942)

ಸಂಸ್ಕೃತ ವಿದ್ವಾಂಸ ಹೆಚ್‌.ವಿ. ನಾಗರಾಜರಾವ್‌  ಮೂಲತಃ ಕೋಲಾರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಯಲ್ಲಿ (10-9-1942) ಹುಟ್ಟಿದರು. ಎರಡೂವರೆ ವರ್ಷದ ಬಾಲಕರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಅಜ್ಜನ ಮನೆಯಲ್ಲಿ ಬೆಳೆದರು. ಪ್ರೌಢಶಾಲೆಯ ವ್ಯಾಸಂಗದ ಬಳಿಕ ಬಟ್ಟೆಯ ಅಂಗಡಿಯಲ್ಲಿ ದುಡಿದರು. ವಿದ್ಯಾಗುರು ವಿದ್ವಾನ್‌ಎನ್‌.ವಿ. ಅನಂತರಾಮಯ್ಯನವರು ಇವರಿಗೆ ನೆರವಾಗುತ್ತಾರೆ. ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತರಾಗಿ ಮೈಸೂರಿಗೆ ಬಂದು ಸಂಸ್ಕೃತ ಮಹಾ ಪಾಠಶಾಲೆ ಸೇರಿ, ಅಲಂಕಾರ ಶಾಸ್ತ್ರಗಳನ್ನು ಕಲಿತರು.  ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದರು.  ಇವರ ವ್ಯಾಕರಣ ಗುರು ವಿದ್ವಾನ್‌ ಸೋ. ರಾಮಸ್ವಾಮಿ ಅಯ್ಯಂಗಾರ್‌ ಅವರು ತಮ್ಮಲ್ಲಿ ಕಲಿಯಲು ಬಂದ ...

READ MORE

Related Books