ಗೆಲಿವರನ ದೇಶಸಂಚಾರ

Author : ಟಿ.ವಿ. ವೆಂಕಟಾಚಲಶಾಸ್ತ್ರೀ

Pages 68

₹ 45.00




Year of Publication: 2019
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ಖ್ಯಾತ ಚಿಂತಕ -ಸಾಹಿತಿ ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರ ಸಂಪಾದಿತ ಕೃತಿ-ಗೆಲಿವರನ ದೇಶ ಸಂಚಾರ. ಎಸ್.ಜಿ. ನರಸಿಂಹಾಚಾರ್ಯರು ಈ ಕೃತಿಯ ಲೇಖಕರು. ಗಲಿವರ್ಸ್ ಟ್ರಾವಲ್ಸ್ -ಕೃತಿಯು ಮಕ್ಕಳಿಗಂತೂ ಅತ್ಯದ್ಭುತ. ಈ ಕೃತಿ ಮಕ್ಕಳ ಪುಸ್ತಕವಾಗಿಯೇ ಪ್ರಖ್ಯಾತಿ ಪಡೆದಿದೆ. ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯ ಪ್ರಥಮ ಪ್ರಯಾಣದ ಕಥೆಯನ್ನು ಎಸ್.ಜಿ.ನರಸಿಂಹಾಚಾರ್ಯರು ಗಲಿವರನ ದೇಶಸಂಚಾರ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ (1900). ಗಲಿವರ್ ಎಂಬ ಹಡಗು ವೈದ್ಯನೊಬ್ಬ ನಾಲ್ಕು ಅಪರಿಚಿತ ಸ್ಥಳಗಳಿಗೆ ಕೈಗೊಂಡ ಸಮುದ್ರಯಾನದ ಕಥೆಯನ್ನು ಬಲು ಸ್ವಾರಸ್ಯವಾಗಿ ವರ್ಣಿಸುತ್ತದೆ. ಮೊದಲ ಪ್ರಯಾಣದಲ್ಲಿ ಆತ ಲಿಲಿಪುಟಿಯನ್ಸ್ ದ್ವೀಪಕ್ಕೆ, ಎರಡನೆಯ ಪ್ರಯಾಣದಲ್ಲಿ ಬ್ರಾಬ್‍ಡಿಂಗ್‍ನಾಗ್ ಎಂಬ ದೈತ್ಯರ ನಾಡಿಗೆ, ಮೂರನೆಯ ಪ್ರಯಾಣದಲ್ಲಿ ಮೂರ್ಖರ ದಡ್ಡರ ಕೆಲವು ರಾಜ್ಯಗಳಿಗೆ, ನಾಲ್ಕನೆಯ ಪ್ರಯಾಣದಲ್ಲಿ ಪ್ರಾಣಿಗಳ ನಾಡಿಗೆ ಭೇಟಿಕೊಡುತ್ತಾನೆ. ಮೂರನೆಯ ಹಾಗೂ ನಾಲ್ಕನೆಯ ಪ್ರಯಾಣದ ಕಥೆಯಲ್ಲಿ ಸ್ವಿಫ್ಟ್ ತನ್ನ ಸಮಕಾಲೀನ ಸಮಾಜವನ್ನು ವಿಡಂಬಿಸಿದ್ದಾನೆಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

About the Author

ಟಿ.ವಿ. ವೆಂಕಟಾಚಲಶಾಸ್ತ್ರೀ
(26 August 1933)

ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...

READ MORE

Related Books