
ಲೇಖಕ ಹಾಗೂ ಅನುವಾದಕ ಟಿ.ಎಸ್ ರಘನಾಥ್ ಅವರ ʼತಂತಿಯ ತುಂಡು ಮತ್ತುಇತರೆ ಯುರೋಪಿಯನ್ ಕಥೆಗಳುʼ ಒಟ್ಟು 13 ಕಥೆಗಳಿವೆ. ಕಥೆಯ ಮೂಲ ಬೊಕಾಷಿರಾಯನ 13ನೇ ಶತಮಾನದಿಂದ ಪ್ರಾರಂಭಗೊಂಡು 20ನೇ ಶತಮಾನದ ಮಧ್ಯಭಾಗದವರೆಗೂ ವಿಸ್ತ್ರತಗೊಂಡಿದೆ. ಇಲ್ಲಿರುವ ಎಲ್ಲಾ ಕಥೆಗಾರರೂ ಯುರೋಪಿನ ಅತ್ಯಂತ ಜನಪ್ರಿಯ ಇಲ್ಲವೇ ಶ್ರೇಷ್ಠ ಲೇಖಕರಾಗಿದ್ದಾರೆ. ಕಥೆಯೂ ಕಥೆಗಾರರ ವೈಯುಕ್ತಿಕ ಬದುಕುಗಳ ಒಳಹೊಕ್ಕು, ಕೆಲವೊಮ್ಮೆ ತಳಮಳ, ಕೆಲವೊಮ್ಮೆ ವಿಷಾದ, ಮತ್ತೆ ಕೆಲವೊಮ್ಮೆ ದುರಂತ ಛಾಯೆಗಳ ನೆರಳಾಗಿ ಅತೀವ ವ್ಯಥೆ ಕಾಣಿಸಿಕೊಳ್ಳುತ್ತದೆ. ಯುರೋಪಿನ ಪ್ರಮುಖ ಕಥೆಗಾರರಾದಂತಹ ಆಸ್ಕರ್ ವೈಲ್ಡ್, ಗೈ ಡೇ ಮೊಪಾಸಾ, ಡಿ.ಎಚ್. ಲಾರೆನ್ಸ್, ಎಮಿಲೀ ಝೋಲಾ, ಫ್ರಾಂಜ್ ಕಾಫ್ಕ ಮತ್ತು ವರ್ಜೀನಿಯಾ ಕಥೆಗಳನ್ನು ಆಯ್ಕೆ ಮಾಡಲಾಗಿದ್ದು, ಜಗತ್ತಿನ ಸಾಹಿತಿಗಳು ಎದುರಿಸುವ ಕಷ್ಟ-ನಷ್ಟಗಳನ್ನು, ಆಂತರಿಕ ನೋವುಗಳನ್ನು ಈ ಕೃತಿಯ ಮೂಲಕ ಅರಿಯಬಹುದಾಗಿದೆ.
©2025 Book Brahma Private Limited.