ನರಿಯ ಬಾಲ

Author : ಜಿ.ಪಿ. ರಾಜರತ್ನಂ

Pages 114

₹ 0.00




Year of Publication: 1941
Published by: ಬಿ.ಬಿ.ಡಿ. ಪವರ್ ಪ್ರೆಸ್
Address: ಬೆಂಗಳೂರು

Synopsys

ಜಿ. ಪಿ. ರಾಜರತ್ನಂ ಅವರು ಮಕ್ಕಳಿಗಾಗಿ ಅನುವಾದಿಸಿದ ಕಥೆಗಳು. ನರಿಯ ಬಾಲ, ಇಬ್ಬರು ಸಹೋದರರು, ಹರಿಣೀ ಹಾಗೂ ರಾಯನರಿ-ಈ ನಾಲ್ಕು ಕಥೆಗಳ ಪೈಕಿ, ಮೊದಲ ಎರಡು-ಗ್ರೀಮ್ಸ್ ಫೇರಿ ಟೇಲ್ಸ್’ ನಿಂದ ಹಾಗೂ ಮೂರನೇಯದ್ದು, ದಿ ಹೈಂಡ್ ಆಫ್ ದಿ ಫಾರೆಸ್ಟ್ ಮತ್ತು ಕೊನೆಯ ಕಥೆ-ರಾಯನರಿ, ರೇನಾರ್ಡ್ ದಿ ಫಾಕ್ಸ್’ ನಿಂದ ಪಡೆಯಲಾಗಿದೆ ಎಂದ ಲೇಖಕ ಜಿ.ಪಿ. ರಾಜರತ್ನಂ ಅವರು ಪ್ರಸ್ತಾವನೆ ಯಲ್ಲಿ ಹೇಳಿದ್ದಾರೆ. 

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books