`ಗಿಳಿಯು ಬಾರದೇ ಇರದು’ ಮೇರಿ ಜೋಸೆಫ್ ಅವರ ಅನುವಾದಿತ ಕೃತಿಯಾಗಿದ್ದು, ಪಿ ಎಸ್ ಶ್ರೀಧರ್ ಪಿಳ್ಳ ಅವರು ಕೃತಿಯ ಮೂಲ ಲೇಖಕ. ಅರಣ್ಯವಾಸ ನಗರವಾಸುಗಳಿಗೆ ನೀಡುವ ಹಿತಾನುಭ, ಪ್ರವಾಸದ ನಂತರದಲ್ಲಿ ಕಾಡುವ ಕಾಡು, ಕಾಡಿನಲ್ಲಿ ಬದುಕು ಕಟ್ಟುವ ಪ್ರಸಂಗ, ಜನರ ಮಧ್ಯೆ ಹೆಣ್ಣು ಹೆಣ್ತನವನ್ನು ಹುಡುಕುವ ಕಟ್ಟುಪಾಡಿನಲ್ಲಿ ತನ್ನ ಜೀವನವನ್ನೇ ಪಣಕ್ಕಿಡುವ ವಿಚಾರ ಹೀಗೆ ಹಲವಾರು ವಿಷಯಗಳು ಈ ಕೃತಿಯಲ್ಲಿ ಅಡಕವಾಗಿದೆ. ಹಸುವಿನಲ್ಲಿ ಸರ್ವಸ್ವವನ್ನು ಕಾಣುವ ಒಂಟಿ ಅಜ್ಜಿಗೆ ವಿದೇಶದಲ್ಲಿ ಶ್ರೀಮಂತ ಮಕ್ಕಳು. ಸಂಧ್ಯಾಕಾಲದಲ್ಲಿ ನೆನೆಸಿಕೊಳ್ಳದವರು ತಾರೀಖಿಗೆ ಕಾಯುತ್ತಿದ್ದಾರೆ. ಕಾರ್ಯ ಮುಗಿಸಿದ ಕಾಯಕ್ಕೆ ಕಾಲವೂ ಸುಮ್ಮನಾಯಿತು. ಅಲ್ಲೊಬ್ಬ ಅಜ್ಜ ಜತನದಿಂದ ಕಾದ ಮಾವಿನಹಣ್ಣು ಪುಟ್ಟ ಹುಡುಗ ತಿಂದ. ಹುಡುಗನ ಆಸೆ ಅಜ್ಜನ ಆಶಯವಾಯ್ತು. ದೊಡ್ಡ ಅರಮನೆಯಲ್ಲಿ ಒಬ್ಬನೇ ಕೂತಿರುವಾಗ ಮುಗಿಲಿನಿಂದ ಹಾರಿ ಬಂದ ಪಂಚವರ್ಣದ ಗಿಳಿ ಅಜ್ಜನಿಗೆ ಸಾಂತ್ವನವ ಹೇಳಿತು. ಆಲೋಚನೆಯ ಮಡುವಿನಲ್ಲಿ ಕೊಚ್ಚಿ ಹೋಗುವಾಗ ಗಿಳಿ ಕಿವಿಮಾತೊಂದು ಹೇಳಿತು. ಹೋಗಿ ಬರುವೆನೆಂದು ಹೇಳಿ ಹೋದರೂ ಅದು ಹೋಗಿತ್ತು. ಆದರೆ ಅಜ್ಜನಿಗೆ ಗೊತ್ತು ಗಿಳಿ ಮತ್ತೆ ಬಾರದೇ ಇರದು.
©2023 Book Brahma Private Limited.