ಮತ್ತೆ ಹೇಳಿದ ಕಥೆಗಳು

Author : ಚಂದ್ರಶೇಖರ್ ಆಲೂರು

Pages 110

₹ 60.00




Year of Publication: 2009
Published by: ಕಥನ ಪ್ರಕಾಶನ
Address: ನಂ.15,ಕಥನ, 7ನೆ ‘ಬಿ’ ಅಡ್ಡರಸ್ತೆ, ಗಾರ್ಡನ್ ವಿಲ್ಲಾಸ್, ನಾಗರಬಾವಿ,ಬೆಂಗಳೂರು-560 072
Phone: 9448334622

Synopsys

ಲೇಖಕ ಚಂದ್ರಶೇಖರ ಆಲೂರು ಅವರ ‘ಮತ್ತೆ ಹೇಳಿದ ಕಥೆಗಳು’ ಅನುವಾದಿತ ಕಥಾಸಂಕಲನವಾಗಿದೆ. ಲೇಖಕರೇ ಹೇಳಿದಂತೆ ‘ಇಲ್ಲಿರುವ ಎಲ್ಲ ಕಥೆಗಳು ಸಾಂಪ್ರದಾಯಿಕ ಅರ್ಥದಲ್ಲಿ ಅನುವಾದಿತ ಕಥೆಗಳಾಗಿವೆ. ಆದರೆ ಈ ಕಥೆಗಳ ಭಾವ ಸಂಗ್ರಹದಲ್ಲಿ ನಾನು ತೆಗೆದುಕೊಂಡ ಅಪರಿಮಿತ ಸ್ವಾತಂತ್ಯ್ರದಿಂದಾಗಿ ಇವನ್ನು ‘ಮತ್ತೆ ಹೇಳಿದ ಕಥೆಗಳು’ ಎಂದು ಕರೆದಿದ್ದೇನೆ. ಈ ಎಲ್ಲ ಕಥೆಗಳು ಮೂಲಕ್ಕೆ ಸಂಪೂರ್ಣ ನಿಷ್ಠವಾಗಿದೆ.  ಖ್ಯಾತ ಫ್ರೆಂಚ್ ಲೇಖಕ ಮೊಪಾಸಾನ ಒಂಭತ್ತು ಕಥೆಗಳಿವೆ. ನನ್ನನ್ನು ಮತ್ತೆ ಮತ್ತೆ ಕಾಡಿದ ಮೂರು ಆಫ್ರಿಕಾದ ಕಥೆಗಳಿವೆ.ಕನ್ನಡ ಓದುಗರಿಗೆ ಪರಿಚಿತರಾದ ಈಶಾನ್ಯ ಭಾರತದ ಜಾನಪದ ಕಥೆಗಳಿವೆ. ‘ಹಾಯ್ ಬೆಂಗಳೂರ್’ ಪತ್ರಿಕೆಯ ನನ್ನ ‘ಒಲಿದಂತೆ ಹಾಡುವೆ’ ಅಂಕಣದಲ್ಲಿ ಈ ಕಥೆಗಳು ಪ್ರಕಟವಾಗಿವೆ. ಇವೆಲ್ಲವೂ ನನ್ನನ್ನು ತಟ್ಟಿದ ಕಥೆಗಳು. ನಿಮ್ಮ ಅಂತಃಕರಣವನ್ನೂ ಮಿಡಿಯಬಲ್ಲವು ಎಂಬ ಖಾತ್ರಿ ನನಗಿದೆ’ ಎಂಬುದಾಗಿ ಕೃತಿಯ ಒಳಪುಟಗಳಲ್ಲಿ ಬರೆದಿದ್ದಾರೆ.

 

About the Author

ಚಂದ್ರಶೇಖರ್ ಆಲೂರು

ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಲೂರು. ತಂದೆ ಶ್ರೀ ಎ.ಎಚ್.ಲಿಂಗಯ್ಯ, ತಾಯಿ ಶ್ರೀಮತಿ ಅಂಕಮ್ಮ. ಏಳು ಸಹೋದರಿಯರು. ತಂದೆ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್‌ ಆಗಿದ್ದರಿಂದ ರಾಜ್ಯದ ವಿವಿಧ ಕಡೆ ವಿದ್ಯಾಭ್ಯಾಸ. 1980 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. 1981 ರಿಂದ 1990 ರವರೆಗೆ 'ಲಂಕೇಶ್ ಪತ್ರಿಕೆ'ಯಲ್ಲಿ; 1994 ರಿಂದ 1996ರ ವರೆಗೆ 'ಈ ವಾರ ಕರ್ನಾಟಕ'ದಲ್ಲಿ ವರದಿ, ಸಿನಿಮಾ ಅಂಕಣ, ಪ್ರಬಂಧ, ಕಥೆ, ವಿಮರ್ಶೆ ಇತ್ಯಾದಿ ಪ್ರಕಟ. 2000 ಜುಲೈನಿಂದ 'ಹಾಯ್ ಬೆಂಗಳೂರ್!' ಪತ್ರಿಕೆಯಲ್ಲಿ ಪ್ರತಿವಾರ “ಒಲಿದಂತೆ ಹಾಡುವೆ' ಅಂಕಣ. 2000ದಲ್ಲಿ ಅಮೆರಿಕಾ ...

READ MORE

Related Books