
ಮರಾಠಿ ಸಾಹಿತ್ಯ ವಲಯದ ಪ್ರಸಿದ್ಧ ಚಿಂತಕ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಸ. ಖಾಂಡೇಕರ್ ಅವರ ಆಯ್ದ ಮರಾಠಿ ಕಥೆಗಳಲ್ಲಿಯ 10 ಕಥೆಗಳನ್ನು ಆಯ್ದು ಕನ್ನಡಕ್ಕೆ ಚಿಂತಕ ವಿ.ಎಂ. ಇನಾಂದಾರ ಅವರು ಅನುವಾದಿಸಿದ್ದೇ ಈ ಕೃತಿ-ದೃಷ್ಟಿಲಾಭ.
ಕಥೆಯ ವಸ್ತು ವೈವಿಧ್ಯತೆ, ನಿರುಪಣಾ ಕೌಶಲ್ಯದಿಂದ ಈ ಕಥೆಗಳು ಆಕರ್ಷಣೆ ಹೊಂದಿವೆ. ಎರಡು ಚಿತ್ರಗಳು, ಅವಳ ಕಣ್ಣುಗಳು, ರಾತ್ರಿಯ ದಿವಸವಾದರೆ, ಕಲ್ಲೆದೆಯ ಕಂಬನಿಗಳು, ಚಂದ್ರಕಲೆ, ಸೇತುವೆ, ಕುರುಡನ ಭಾವಬಿದಿಗೆ ಹಾಗೂ ದೃಷ್ಟಿಕೋನ ಹೀಗೆ 10 ಕಥೆಗಳನ್ನು ಅನುವಾದಿಸಲಾಗಿದೆ.
‘ನಾನು ಜನರಾಡುವ ಮಾತಿಗೆ ದೂರವಾಗಿರದೇ, ಗ್ರಂಥಸ್ಥ ಭಾಷೆಗೆ ಅವಶ್ಯವಾದ ಕೆಲವಾದರೂ ಕಟ್ಟುಗಳುಳ್ಳ ಒಂದು ಮಧ್ಯಮ ಮಾರ್ಗವನ್ನು ಕಲ್ಪಿಸಿಕೊಳ್ಳಲಿಕ್ಕೆ ಯತ್ನಿಸಿದ್ದೇನೆ’ ಎಂದು ಅನುವಾದಕರು ತಮ್ಮ ಅನುವಾದದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
©2025 Book Brahma Private Limited.