ಆರು ಟಾಲ್‌ಸ್ಟಾಯ್ ಕಥೆಗಳು

Author : ಮಾಧವ ಚಿಪ್ಪಳಿ

Pages 120

₹ 150.00




Year of Publication: 2009
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 57741
Phone: 9480280401

Synopsys

ಲೇಖಕ ಮಾಧವ ಚಿಪ್ಪಳಿ ಅವರು ಅನುವಾದಿಸಿದ  ಪುಸ್ತಕ ʼಆರು ಟಾಲ್‌ಸ್ಟಾಯ್ ಕಥೆಗಳು. ಪ್ರಸ್ತುತ ಸಂಕಲನದ ಎಲ್ಲಾ ಕತೆಗಳೂ ಟಾಲ್‌ಸ್ಟಾಯ್‌ ಅವರ ದ್ವಿತೀಯಾರ್ಧದ ಬರವಣಿಗೆಯನ್ನು ಪ್ರತಿನಿಧಿಸುವ ಕೆಲವು ಮುಖ್ಯ ನಿದರ್ಶನಗಳಾಗಿವೆ. ಪುಸ್ತಕದ ಬಗ್ಗೆ ಮುನ್ನುಡಿ ಬರೆದ ಲೇಖಕ ಟಿ.ಪಿ. ಅಶೋಕ ಅವರು, ಕತೆಗಳಲ್ಲಿ ಪ್ರಜ್ಞಾಪೂರ್ವಕ ಕಲೆಗಾರಿಕೆಯಾಗಲೀ ಕುಸುರಿ ಕೆಲಸದ ಕಸುಬುಗಾರಿಕೆಯಾಗಲೀ ಕಂಡುಬರುವುದಿಲ್ಲ. ಹಿರಿಯನೊಬ್ಬ ತನ್ನ ಮಕ್ಕಳು, ಮೊಮ್ಮಕ್ಕಳು, ಬಂಧು ಬಾಂಧವರು, ನೆರೆ ಹೊರೆಯವರೊಂದಿಗೆ ಹಂಚಿಕೊಂಡ ಅನುಭವ ಕಥನಗಳಂತಿರುವ ಈ ಬರಹಗಳು ತಮ್ಮ ಸರಳತೆ ಮತ್ತು ಸಹಜತೆಗಳಿಂದಾಗಿ ಮನಮುಟ್ಟುತ್ತವೆ. ಅಪಾರ ಜೀವನಾನುಭವದಿಂದ ಮೂಡಿಬಂದ ವಿವೇಕ ಈ ಕತೆಗಳ ರೂಪದಲ್ಲಿ ನಿರೂಪಣೆಗೆ ಒಳಗಾಗಿದೆ ಎನಿಸುತ್ತದೆ. ಈ ಎಲ್ಲ ಕತೆಗಳ ಕೇಂದ್ರದಲ್ಲಿರುವುದು ಸಾಮಾನ್ಯ ರಷ್ಯನ್ನರು. ಅವರ ಬದುಕಿನ ಸುತ್ತ ಹೆಣೆದ ದೃಷ್ಟಾಂತಗಳಂತಿರುವ ಈ ಕತೆಗಳು ಮೇಲುನೋಟಕ್ಕೆ ಸರಳವೆನಿಸಿದರೂ ಬದುಕನ್ನು ಕುರಿತು ಅನೇಕ ಮೂಲಭೂತವಾದ ತಾತ್ತ್ವಿಕ ಪ್ರಶ್ನೆಗಳ ಚಿಂತನ ಮಂಥನವನ್ನು ನಡೆಸುತ್ತವೆ ಎಂದು ಹೇಳಿದ್ದಾರೆ..

About the Author

ಮಾಧವ ಚಿಪ್ಪಳಿ

ಲೇಖಕ, ಅನುವಾದಕ ಮಾಧವ ಚಿಪ್ಪಳಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಚಿಪ್ಪಳಿಯವರು. ಸಾಗರದ ಲಾಲ್‍ಬಹಾದೂರ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ., ಜೊತೆಗೆ ಮಣಿಪಾಲ ವಿಶ್ವವಿದ್ಯಾಲಯದಿಂದ ಭಾಷಾತತ್ತ್ವಶಾಸ್ತ್ರ ಮತ್ತು ಭಾಷಾಂತರ ಅಧ್ಯಯನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅವರು ಬರೆದ ಭಾಷೆ-ತತ್ತ್ವ-ಕವಿತೆಗಳ ಕುರಿತ ಪ್ರಬಂಧಗಳ ಸಂಕಲನ ‘ನುಡಿಯೊಡಲು,’ ಅನುವಾದಿಸಿರುವ ‘ಆರು ಟಾಲ್‍ಸ್ಟಾಯ್ ಕತೆಗಳು’ ಮತ್ತು ಜಿಯಾವುದ್ದೀನ್ ಸರ್ದಾರರ ‘ಸ್ವರ್ಗ ಸಾಧನೆಯ ಉತ್ಕಟ ಬಯಕೆ: ಸಂದೇಹಿ ಮುಸ್ಲಿಮನ ಯಾತ್ರೆಗಳು’ ಈಗಾಗಲೇ ಪ್ರಕಟಗೊಂಡಿವೆ. ಅವರ ‘ಆರು ಟಾಲ್‍ಸ್ಟಾಯ್ ಕತೆಗಳು’ ಪುಸ್ತಕಕ್ಕೆ ...

READ MORE

Related Books