
‘ಢಮಾರ್ ಎನ್ನುವ ಪತ್ರಿಕೆ’: ಮತ್ತಿತರ ಅತಿಸಣ್ಣ ಕತೆಗಳು ಹಿರಿಯ ಲೇಖಕ ಎಸ್. ದಿವಾಕರ್ ಅವರು ಅನುವಾದಿಸಿರುವ ಸಣ್ಣಕತೆಗಳ ಸಂಕಲನ. ಪುಸ್ತಕದ ಕುರಿತು ಬರೆಯುತ್ತಾ ಇದು ನಾನು ಅನುವಾದಿಸಿರುವ ನಾಲ್ಕನೆಯ ಅತಿಸಣ್ಣ ಕತೆಗಳ ಸಂಕಲನ. ಇಲ್ಲಿ ಹಲವು ದೇಶಗಳ ಅತಿಸಣ್ಣ ಕತೆಗಳಿವೆ. ಮಾಸ್ತಿಯವರು ಲಂಡನ್ನಿನ ಸ್ಟ್ರ್ಯಾಂಡ್ ಪತ್ರಿಕೆಯಲ್ಲಿ ಬರುತ್ತಿದ್ದ ಕತೆಗಳನ್ನ ಓದಿ ತಮಗೂ ಕತೆ ಬರೆಯಬೇಕೆನ್ನಿಸಿತೆಂದು ಒಮ್ಮೆ ಹೇಳಿದ್ದುಂಟು. ನಾನು ನನಗೆ ಇಷ್ಟವಾದ ಜಗತ್ತಿನ ಬೇರೆ ಬೇರೆ ದೇಶಗಳ ಅತಿಸಣ್ಣ ಕತೆಗಳನ್ನು ಸತತವಾಗಿ ಅನುವಾದಿಸುತ್ತಿರುವುದಕ್ಕೆ ಕಾರಣ ನಮ್ಮ ಕಾಲದ ಕತೆಗಾರರು ಅವುಗಳನ್ನು ಓದಿ ತಾವೂ ಅತ್ಯುತ್ತಮ ಅತಿಸಣ್ಣ ಕತೆಗಳನ್ನು ಬರೆಯುವಂತಾಗಲಿ, ಅದರಿಂದ ನಮ್ಮಲ್ಲೂ ಈ ಪ್ರಕಾರದ ಒಂದು ಪರಂಪರೆ ಸೃಷ್ಟಿಯಾಗಲಿ ಎಂಬ ಸದಾಶಯವಷ್ಟೇ, ಅತಿಸಣ್ಣ ಕತೆಯ ಸ್ವರೂಪವನ್ನು ತಿಳಿಯಬಯಸುವವರು ನಾನು ಸಂಪಾದಿಸಿರುವ ಕನ್ನಡ ಅತಿಸಣ್ಣ ಕತೆಗಳು ಸಂಕಲನದ ಪ್ರಸ್ತಾವನೆಯನ್ನು ಒಮ್ಮೆ ಓದಬಹುದು ಎಂದಿದ್ದಾರೆ.
©2025 Book Brahma Private Limited.