
‘ಕೊನೆಯ ಗುಟುಕು’ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ) ಅವರ ಕಾದಂಬರಿಯಾಗಿದೆ. ದಿನಚರ್ಯೆ, ಋತುಚರ್ಯೆ, ಸತ, ಸ್ವಚ್ಛವೃತ್ತಗಳ ಸೂಕ್ಷ್ಮ ಪರಿಚಯ, ಶರೀರ ವಿಜ್ಞಾನ (ಸೂಕ್ಷ್ಮ ಪರಿಚಯ), ರೋಗನಿದಾನದ ಸೂಕ್ಷ್ಮ ಪರಿಚಯದಲ್ಲಿ ಅನುಸರಿಸಬೇಕಾದ ವಿಧಾನ, ರೋಗಿಗಳ ಶುಶೂಷೆಯಲ್ಲಿ ಅನುಸರಿಸಬೇಕಾದ ನಿಯಮ ವನೌಷಧಿಗಳ ಪರಿಚಯ, ಔಷಧ ದ್ರವ್ಯಗಳ ಸಂಕೇತ ನಾಮಗಳು ರೋಗೋಕ್ತ ಔಷಧ ರಚನಾ ಪರಿಭಾಷಾ ಯಾವ ಔಷಧಿಯ ಯಾವ ಭಾಗ, ದ್ರವ್ಯಶುದ್ಧಿ, ಪಥ್ಯಾಪಥ್ಯ ವಿಚಾರವನ್ನು ಕೃತಿಯು ಒಳಗೊಂಡಿದೆ. ದಿನಚರ್ಯೆ ಋತುಚರ್ಯೆ, ಸ್ವಸ್ಥ ವೃತ್ರಗಳ ವಿವರವಾದ ಪರಿಚಯವನ್ನಿಲ್ಲಿ ನಾನು ನೀಡಲು ಇಚ್ಛಿಸುವುದಿಲ್ಲ. ಅದು ಶಾಸ್ತ್ರದ ಗಂಟು: ಕೇವಲ ವೈದ್ಯಕೀಯ ಶಿಕ್ಷಣ ಪಡೆದು ತಮ್ಮ ಜೀವನದಲ್ಲಿ ವೈದ್ಯಕೀಯ ವೃತ್ತಿಯನ್ನೇ ಅವಲಂಬಿಸತಕ್ಕವರಿಗೆ ಇವುಗಳೆಲ್ಲ ಅಗತ್ಯ- -ವಾದರೂ ಗೃಹವೈದ್ಯದ ಶಿಬಿರಾರ್ಥಿಗಳಿಗೆ ಇಷ್ಟೆಲ್ಲ ಕೇವಲ ಹೊರೆ. ಆದರೂ ಮೇಲೆ ಹೇಳಿರುವ ಎಲ್ಲವುಗಳಲ್ಲಿ ಮುಖ್ಯವಾದ ವಿಚಾರಗಳನ್ನಷ್ಟೇ ಇಲ್ಲಿ ಸಂಗ್ರಹಿಸಲಾಗಿದೆ ಎಂಬುವುದನ್ನು ತಿಳಿಯಬಹುದು.
©2025 Book Brahma Private Limited.