
ಲೇಖಕ ಆನಂದ ಋಗ್ವೇದಿ ಅವರ ಸಂಶೋಧನಾ ಗ್ರಂಥ-ಕಥಾ ಸ್ವರೂಪ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಕೃತಿ ಧನ ಸಹಾಯ ಪಡೆದಿದೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ನಟರಾಜ ಹುಳಿಯಾರ್ ‘ಲಯ, ಶ್ರದ್ಧೆ, ಹಸಿವು, ಅಸ್ತಿತ್ವದ ಪರಿಕಲ್ಪನೆಗಳನ್ನು ಕನ್ನಡ ಸಂಶೋಧನಾ ವಲಯದಲ್ಲಿ ಹೆಚ್ಚು ಗಂಭೀರವಾಗಿ ಚರ್ಚಿತವಾಗದ ಕತೆಗಾರರ ಕತೆಗಳ ಮೂಲಕ ಗ್ರಹಿಸಲು ಯತ್ನಿಸುವುದು ಇಲ್ಲಿನ ವಿಶೇಷ. ಲಯದ ಪರಿಕಲ್ಪನೆಯ ಮೂಲಕ ರಾಘವೇಂದ್ರ ಪಾಟೀಲರ ಕತೆಗಳನ್ನು ಹಾಗೂ ಶ್ರದ್ಧೆಯ ಪರಿಕಲ್ಪನೆಯ ಮೂಲಕ ಬೋಳುವಾರರ ಕತೆಗಳನ್ನು ಚರ್ಚಿಸಿರುವ ಕ್ರಮ ವಿಭಿನ್ನವಾಗಿದೆ. ಬೋಳುವಾರರ ಕತೆಗಳನ್ನು ಕೇವಲ ಮುಸ್ಲಿಂ ಸಂವೇದನೆಯ ಆಥವಾ ಬಂಡಾಯದ ಆಶಯದ ಬೆನ್ನಲ್ಲೇ ಹಳೆಯ ರೀತಿಗಳಿಗಿಂತ ಶ್ರದ್ಧೆ ಎಂಬ ಕೇಂದ್ರದ ಮೂಲಕ ಈ ಕತೆಗಳನ್ನು ಚರ್ಚಿಸಿರುವ ರೀತಿ ಕುತೂಹಲಕಾರಿಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.