
’ಪ್ರಸಿದ್ದ ಚೀನೀ ಕಥೆಗಳು’ ಅನುವಾದಿತ ಕೃತಿಯಾಗಿದ್ದು ಮೂಲ ಚೀನೀ ಕಥೆಗಾರ್ತಿಯರಾದ ಹುವಾಂಗ್ ಝಾಂಗ್ ಯಿಂಗ್, ರುಜಿಜುವಾನ್, ಝೋಂಗ್ ಪು, ಜಾಂಗ್ ಜೀ, ವ್ಯಾಂಗ್ ಆನ್ಯಿ, ಜಾಂಗ್ ಕಾಂಗ್ ಕಾಂಗ್, ಮತ್ತು ಷೆನ್ ರೋಂಗ್ ರಚಿಸಿದ ಕತೆಗಳನ್ನು ಕನ್ನಡಕ್ಕೆ ಡಾ. ವಿಜಯಾ ಸುಬ್ಬರಾಜ್ ತಂದಿದ್ದಾರೆ.
ಚೀನೀ ಕಥೆಗಳ ಕನ್ನಡ ಅನುವಾದ ಕಾಡು ಹಕ್ಕಿಗಳ ಪಯಣ (ದಿ ಫ್ಲೈಟ್ ಆಫ್ ದಿ ವೈಲ್ಡ್ ಗೂಸ್) ,ಹುಲ್ಲುಗಾವಲ ಹಾದಿಗುಂಟ (ದಿ ಪಾತ್ ತ್ರೂ ದಿ ಗ್ರಾಸ್ ಲ್ಯಾಂಡ್), ಕನಸಿನಲ್ಲಿ ಮಧುರ ತರಂಗಗಳು(ಮೆಲೊಡಿ ಇನ್ ಡ್ರೀಮ್ಸ್), ಪ್ರೀತಿಯನ್ನು ಮರೆಯಲಾಗದು (ಲವ್ ಮಸ್ಟ್ ನಾಟ್ ಬಿ ಫರ್ಟಾಟನ್), ಪುಟ್ಟ ಅಂಗಳದಲ್ಲಿನ ಬದುಕು, (ಲೈಫ್ ಇನ್ ಎ ಸ್ಟಾಲ್ ಕೋರ್ಟ್‌ಯಾರ್ಡ್), ವ್ಯರ್ಥವಾದ ವರ್ಷಗಳು ( ದಿ ವೇಸ್ಟೆಡ್ ಇಯರ್‍ಸ್), ನಡು ವಯಸ್ಸಿನಲ್ಲಿ( ಅಟ್ ಮಿಡಲ್ ಏಜ್ ) ಕತೆಗಳು ಈ ಕೃತಿಯಲ್ಲಿವೆ.
ಇಲ್ಲಿರುವ ಚೀನೀ ಕಥೆಗಾರ್ತಿಯರು ಇಪ್ಪತ್ತನೇ ಶತಮಾನದ ಇಪ್ಪತ್ತರ ದಶಕದಿಂದ ಐವತ್ತರ ದಶಕದವರೆಗಿನ ಕಾಲಘಟ್ಟದಲ್ಲಿ ಹುಟ್ಟಿದವರಾಗಿದ್ದು, ಸಾಂಸ್ಕೃತಿಕ ಕ್ರಾಂತಿಯ ಭೀಕರ ಪರಿಣಾಮಗಳನ್ನು ಕಂಡುಂಡವರಾಗಿದ್ದರು. ಆದ್ದರಿಂದ ತಮ್ಮ ಅನುಭವಗಳ ಹಿನ್ನೆಲೆಯಾಗಿಸಿಕೊಂಡು, ಕಥಾ ಸಂದರ್ಭಗಳಿಗೆ ಕತೆಯನ್ನು ಬಿತ್ತರಿಸಿದ್ದಾರೆ.
©2025 Book Brahma Private Limited.