
‘ಲಿಂಗಾಯತ ಸ್ವತಂತ್ರಧರ್ಮ’ ಎಂ.ಎಂ. ಕಲಬುರ್ಗಿ ಅವರ ಸಂಶೋಧನಾ ಕೃತಿಯಾಗಿದೆ. ಲಿಂಗಾಯತ ಕನ್ನಡಿಗರು ಕಟ್ಟಿದ ಕನ್ನಡದ ಮೊದಲ ಧರ್ಮ ಎಂದು ಹೇಳಿದ ಅವರು ಸಂಶೋಧನೆಯ ಆಧಾರಗಳಿಂದ ಲಿಂಗಾಯತರು ಹಿಂದೂ ಧರ್ಮಕ್ಕಿಂತ ಹೇಗೆ ಭಿನ್ನ ಎಂಬುದನ್ನು ಹಲವು ಆಧಾರಗಳಿಂದ ರುಜುವಾತು ಪಡಿಸಿದ್ದರು. ಅದೊಂದು ಸ್ವತಂತ್ರ ಧರ್ಮ ಎಂದ ಅವರ ಇಂಥ ಅಪ್ರಿಯ ಸತ್ಯಗಳಿಂದ ಕುಪಿತಗೊಂಡ ಸನಾತನವಾದಿಗಳು ಅವರನ್ನು ಹತ್ಯೆ ಮಾಡಿದ್ದನ್ನು ಕನ್ನಡ ನಾಡು ಕಾಣುವಂತಾಯಿತು. ಲಿಂಗಾಯತ ಧರ್ಮ ಮತ್ತು ಶರಣ ಪರಂಪರೆ ಬಗ್ಗೆ ವಿಚಾರವನ್ನು ಹೊಂದಿರುವ ಈ ಸಂಶೋಧನಾ ಗ್ರಂಥವು 16 ಲೇಖನಗಳನ್ನು ಒಳಗೊಂಡಿದೆ.
©2025 Book Brahma Private Limited.