
ಖ್ಯಾತ ತಮಿಳು ಲೇಖಕರಾದ ಟಿ.ಜಾನಕಿರಾಮನ್ ಅವರ 17 ಸಣ್ಣ ಕತೆಗಳ ಕನ್ನಡಾನುವಾದ. ಆಯ್ಕೆ ಮತ್ತು ಅನುವಾದ ಕೆ ನಲ್ಲತಂಬಿ ಅವರದು. ಈ ಪುಸ್ತಕಕ್ಕೆ ಕಥೆಗಾರ ಬೊಳುವಾರು ಮಹಮದ್ ಕುಂಞ ಬೆನ್ನುಡಿ ಬರೆದಿದ್ದಾರೆ. ಅಷ್ಟಿಷ್ಟನ್ನಾದರೂ ಓದಿಕೊಂಡಿರುವ ನಾವು, ಮಹಾತ್ಮ ಗಾಂಧಿ ಮಾರ್ಗದಲ್ಲಿ ನಡೆಯದೆ, ಕ್ರಾಸ್ ರೋಡ್ಗಳಲ್ಲಿಯೇ ಬಚ್ಚಿಟ್ಟುಕೊಂಡಿದ್ದೇವೆ. ಯಾಕೆಂದರೆ ನಾವು ಪುಕ್ಕಲರು. ಎಂದು ಬೆನ್ನುಡಿಯಲ್ಲಿ ಬರೆಯುವ ಅವರು, ಗಾಂಧಿಗಿದ್ದ ಧೈರ್ಯದಲ್ಲಿ ಒಂದಿಷ್ಟಾದರೂ ಹೊಂದಬೇಕೆನ್ನುವವರು, ಹೃದಯವಂತ ಕತೆಗಾರ ನಲ್ಲತಂಬಿ ಅವರು ಅನುವಾದಿಸಿರುವ, ತಮಿಳಿನ ಸುಪ್ರಸಿದ್ಧ ಸಾಹಿತಿ ದೇವಿಭಾರತಿ ಅವರ ಅದ್ಭುತ ಕತೆ ‘ಮತ್ತೊಂದು ರಾತ್ರಿ’ಯನ್ನು ದಿನಕ್ಕೊಮ್ಮೆಯಾದರೂ ಓದುವುದು ಒಳ್ಳೆಯದು ಎಂದಿದ್ದಾರೆ.
©2025 Book Brahma Private Limited.