
‘ನೀಲಿಗುಚ್ಛ’ ಇಂಗ್ಲಿಷ್ ನಿಂದ ಎಂ.ಎಸ್. ರಘುನಾಥ್ ಕನ್ನಡಕ್ಕೆ ಅನುವಾದಿಸಿರುವ ಕಥಾಸಂಕಲನ. ಇಂಗ್ಲಿಷ್, ರಷ್ಯನ್, ಜರ್ಮನ್ ಭಾಷೆಯ ಬಹುಮುಖ್ಯ ಕತೆಗಾರರ ಕಥೆಗಳನ್ನು ಎಂ.ಎಸ್. ರಘುನಾಥ್ ಅವರು ಕನ್ನಡೀಕರಿಸಿದ್ದಾರೆ. ಕಾಲ-ದೇಶಗಳ ಗಡಿಮೀರಿ ಮನುಷ್ಯನ ನೋವು-ನಲಿವು ಬದುಕಿಗ ಗತಿಗಳು ಎಲ್ಲರಿಗೂ ಅನ್ವಹಿಸುತ್ತವೆ. ಅಂತಹದ್ದೇ ಕಥೆಗಳು ಇಲ್ಲಿ ಸಂಕಲನಗೊಂಡಿವೆ.

ಪುಸ್ತಕ ಪರಿಚಯ: ಹೊಸತು-2009 ಜೂನ್
ಇವು ಇಂಗ್ಲಿಷ್, ರಷ್ಯನ್, ಜರ್ಮನ್ ಭಾಷೆಯ ಲೇಖಕರ ಕಥೆಗಳಾಗಿದ್ದು ಇಂಗ್ಲಿಷ್ ಮೂಲಕ ಕನ್ನಡಕ್ಕೆ ಅನುವಾದ ಗೊಂಡಿವೆ. ವಿಶ್ವಸಾಹಿತ್ಯದಲ್ಲಿ ಎಲ್ಲ ದೇಶಪ್ರದೇಶಗಳ ಕಥೆ ಗಳಿಗೂ ತನ್ನದೇ ಸ್ವಂತಿಕೆಯಿರುತ್ತದೆ. ಯಾವುದೇ ವಿಷಯ, ಘಟನೆ, ಮೌಲ್ಯಗಳನ್ನು ಬೇರೆ ಬೇರೆ ದೇಶಗಳು ವಿವಿಧ ರೀತಿಯಲ್ಲಿ ಅರ್ಥೈಸುತ್ತವೆ. ನಮ್ಮ ದೇಶದ ಮೌಲ್ಯ ಇನ್ನೊಂದಕ್ಕೆ ನಗಣ್ಯವಿರಬಹುದು. ಇಂಥವನ್ನು ಆಯಾ ದೇಶದ ಮೂಲಕ ಮಾತ್ರ ಅವರ ಕಣ್ಣಲ್ಲೇ ನಾವು ನೋಡಲು ಸಾಧ್ಯ. ಇಷ್ಟೆಲ್ಲ ಭಿನ್ನತೆಗಳಿದ್ದರೂ ಹಸಿವು, ನಿರುದ್ಯೋಗ, ಮಾನವೀಯತೆ, ಸಾವು-ನೋವುಗಳಂತಹ ಪ್ರಶ್ನೆ ಬಂದಾಗ ಅದಕ್ಕೆ ಸ್ಪಂದಿಸುವ ಸೂಕ್ಷ್ಮ ಎಳೆಯೊಂದು ಎಲ್ಲ ದೇಶ-ಕಾಲಗಳಲ್ಲೂ ಒಂದೇ ಮುಖವನ್ನು ತೋರ್ಪಡಿಸುತ್ತದೆ. ಮನುಷ್ಯರೆಲ್ಲ ಒಂದೇ ಎಂದು ಧ್ವನಿಸುವ ಇಲ್ಲಿನ ಹತ್ತು ಕಥೆಗಳನ್ನು ಓದಿ.
©2025 Book Brahma Private Limited.