ಆರ್ಯಕೀರ್ತಿ

Author : ಚ. ವಾಸುದೇವಯ್ಯ

Pages 218

₹ 4.00




Year of Publication: 1925
Published by: ಬೆಂಗಳೂರು ಪ್ರೆಸ್
Address: ಬೆಂಗಳೂರು

Synopsys

'ಆರ್ಯಕೀರ್ತಿ’ ದ್ವಿತೀಯ ಕಂಡ ಛತ್ರಪತಿ ಶಿವಾಜಿ ಕೃತಿಯು ಚ. ವಾಸುದೇವಯ್ಯ ಅವರ ವ್ಯಕ್ತಿಚಿತ್ರಣವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ‘ಆರ್ಯಕೀರ್ತಿ'ಯ ಈ ದ್ವಿತೀಯ ಖಂಡವು ಇಪ್ಪತ್ತೇಳು ವರ್ಷ ಗಳ ಹಿ೦ದೆ ಅಚ್ಚಾಯಿತು. ವಿದ್ಯಾಭ್ಯಾಸದ ಇಲಾಖೆಯ ಅಧಿಕಾರಿಗಳು ಇದನ್ನು 1925-26ನೆಯ ಸ್ಕೂಲ್ ಫೈನಲ್ ಪರೀಕ್ಷೆಗೆ ಪಠ್ಯ ಪುಸ್ತಕ ನನ್ನಾಗಿ ನೇಮಿಸಿದುದರಿಂದ ಇದರ ಪುನರ್ಮುದ್ರಣಕ್ಕೆ ಅವಕಾಶ ವಾಯಿತು. ಅನೇಕ ಮಂದಿ ಪಂಡಿತರು ಆಂಗ್ಲೀಯ ಭಾಷೆಯಲ್ಲಿಯೂ ದೇಶ ಭಾಷೆಗಳಲ್ಲಿಯೂ ಛತ್ರಪತಿ ಶಿವಾಜಿಯ ಜೀವನ ಚರಿತ್ರೆಯನ್ನು ಬರೆ ದಿದ್ದಾರೆ. ದಿವಂಗತರಾದ ಮಹಾದೇವ ಗೋವಿಂದ ರಾನಡೆಯವರೂ ಮ.ರಾಃ ಶ್ರೀ ಕೃ. ಅ. ಕಳಸಕರರ, ವಿ. ಸಿ.ವಿ. ರ್ಕಿಕೇಡ್ ಅವರೂ ರಚಿಸಿರುವ ಗ್ರಂಥಗಳ ಸಹಾಯದಿಂದ ನಾನು ಈ ಸಣ್ಣ ಪುಸ್ತಕ ವನ್ನು ಪರಿಷ್ಕರಿಸಿ, ಕಥಾನಾಯಕನ ವಿಷಯದಲ್ಲಿ ತಿಳಿಯಬೇಕಾದ ಕೆಲವು ವಿಶೇಷಾಂಶಗಳನ್ನು ಸೇರಿಸಿ, ಅಲ್ಲಲ್ಲಿ ಭಾಷೆಯನ್ನೂ ಪರಿವರ್ತಿಸಿ, ಈ ಸಾರಿ ಅಚ್ಚು ಹಾಕಿಸಿದ್ದೇನೆ. ಮೊದಲನೆಯ ಪ್ರಕರಣದಲ್ಲಿ ಹೇಳಿರುವ ಸಂಗತಿ ಗಳನ್ನು ವಿ: ವಿ. ಎ. ಸ್ಮಿತ್ ಅವರ ಚರಿತ್ರೆಯಿಂದ ತೆಗೆದುಕೊಂಡಿದ್ದೇನೆ ಎನ್ನುತ್ತಾರೆ ಇಲ್ಲಿ ಲೇಖಕ

About the Author

ಚ. ವಾಸುದೇವಯ್ಯ
(02 August 1852 - 26 December 1943)

ಸಾಹಿತಿ, ಹೊಸಗನ್ನಡ ಭಾಷಾ ಸಾಹಿತ್ಯದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ವಾಸುದೇವಯ್ಯನವರು 1852 ಆಗಸ್ಟ್‌ 02 ರಂದು ಚನ್ನಪಟ್ಟಣದಲ್ಲಿ ಜನಿಸಿದರು. ಸೆಂಟ್ರಲ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ವಿದ್ಯಾ ಇಲಾಖೆಯ ಇನ್‌ಸ್ಪೆಕ್ಟರ್‌ ಜೆನರಲ್‌ ಕಚೇರಿಯಲ್ಲಿ ಗುಮಾಸ್ತರಾಗಿ, ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಇವರು ಮಕ್ಕಳಿಗಾಗಿ ಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದರು. ಬಂಗಾಳಿ ಭಾಷೆಯ ರಾಜಪುತ್ರ ಮಹಿಮೆ ಕೃತಿಯನ್ನು ಆರ್ಯಕೀರ್ತಿ ಭಾಗ-೧ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದರು. ಆರ್ಯಕೀರ್ತಿ ಭಾಗ-೨, ಭೀಷ್ಮನ ಸತ್ಯ ಪ್ರತಿಜ್ಞೆ ಸೇರಿದಂತೆ ಹಲವು ಕೃತಿಗಳನ್ನು ...

READ MORE

Related Books