ಖಾಕಿ ತೋಟದ ಹೂವುಗಳು

Author : ರಾಹು ಅಲಂದಾರ

Pages 209

₹ 240.00




Year of Publication: 2023
Published by: ನಿರಂತರ ಪ್ರಕಾಶನ
Address: ಎಮ್. ಆರ್. ಅತ್ತಾರ ಬಿಲ್ಡಿಂಗ್, ಅಮರೇಶ್ವರ ನಗರ, 5ನೇ ಕ್ರಾಸ್, ಗದಗ-582103

Synopsys

‘ಖಾಕಿ ತೋಟದ ಹೂವುಗಳು’ ಕೃತಿಯು ರಾಹು ಅಲಂದಾರ ಅವರು ರಚಿಸಿರುವ ಪೊಲೀಸ್ ಸಾಧಕರ ವ್ಯಕ್ತಿ ಚಿತ್ರಣವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ನಮ್ಮ ಸಂವಿಧಾನದಲ್ಲಿ ಪ್ರಮುಖ ಅಂಗಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗಗಳ ಜವಾಬ್ದಾರಿ ಗುರುತರವಾದುದು, ಈ ದೇಶದ ಜನ ಸ್ವಾಸ್ಥ್ಯರಾಗಿ ನೆಮ್ಮದಿಯ ಬದುಕು ಕಳೆಯುತ್ತಿರುವುದಕ್ಕೆ ಕೋರ್ಟು ಮತ್ತು ಪೊಲೀಸ್ ಇಲಾಖೆಯ ಕಾರ್ಯದಕ್ಷತೆಯಿಂದ ಮಾತ್ರ ಸಾಧ್ಯವಾಗಿದೆ. ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿರುವ ಸಂದರ್ಭದಲ್ಲಿ ತಹಬದಿಗೆ ತರುವವರು ಪೊಲೀಸರು, ಪೊಲೀಸ್ ಇಲಾಖೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ. ಒಂದು ಊರಿಂದ ಇನ್ನೊಂದು ಊರಿನ ಬಸ್ ಹತ್ತಲು, ರಸ್ತೆ ದಾಟಲು, ಜಾತ್ರೆ- ಉರುಸು, ಮೆರವಣಿಗೆ, ಮಾರುಕಟ್ಟೆ, ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು, ರೋಡ ರೋಮಿಯೋಗಳನ್ನು ಹದ್ದುಬಸ್ತಿನಲ್ಲಿಡಲು, ಕುಡುಕರ ಉಪಟಳ ತಡೆಯಲು, ರಾತ್ರಿ ಮನೆ-ಆಸ್ತಿ ಕಾಪಾಡಲು, ದೇವಸ್ಥಾನ, ಗುಡಿ, ಚರ್ಚು, ಮಸೀದಿ, ಸತ್ಯಾಗ್ರಹಗಳನ್ನು ಕಾಯುವ, ಕಳ್ಳತನ ತಡೆಗಟ್ಟಲು, ರಸ್ತೆ ಅಪಘಾತ, ಬೇವರ್ಸಿ ಹೆಣ ಕಾಯಲು ಇಲ್ಲವೆ, ಅಂತ್ಯಸಂಸ್ಕಾರಕ್ಕೂ ಪೊಲೀಸರ ಸಹಾಯಹಸ್ತ ಬೇಕಾಗಿದೆ. ಈ ನಾಡಿನ ಸ್ವಾಸ್ಥ್ಯ ಕಾಪಾಡುವ ಪೊಲೀಸರು ಕೋಮು ಗಲಭೆಗಳಲ್ಲಿ, ಗುಂಪು ಘರ್ಷಣೆಗಳಲ್ಲಿ ಗಾಯಗೊಂಡಿದ್ದಾರೆ. ಜೀವ ತೆತ್ತಿದ್ದಾರೆ ಅವರ ಅವಲಂಬಿತ ಕುಟುಂಬವನ್ನು ಅನಾಥಗೊಳಿಸಿದ್ದಾರೆ. ಕೆಲ ವಿಷಮ ಪರಿಸ್ಥಿತಿಗಳಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ್ದಾರೆ. ಹೋರಾಡುತ್ತಾರೆ. ಆದರೆ ನಮ್ಮ ಮಾನ-ಪ್ರಾಣ, ಆಸ್ತಿ ಕಾಪಾಡುವ ಪೊಲೀಸರನ್ನು ಸಿನೆಮಾ, ನಾಟಕಗಳಲ್ಲಿ ಜೋಕ‌ರ್ ಅಥವಾ ವಿಲನ್‌ಗಳಾಗಿ ಚಿತ್ರಿಸುತ್ತಾರೆ. ನಿಜವಾದ ಹೀರೋಗಳ ಆತ್ಮಸ್ಥೆರ್ಯ ಕುಗ್ಗಿಸಿದ್ದಾರೆ.

About the Author

ರಾಹು ಅಲಂದಾರ

ಲೇಖಕ ರಾಹು ಅಲಂದಾರ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರು. ವೃತ್ತಿಯಲ್ಲಿ ಕಾನ್ ಸ್ಟೇಬಲ್. ಪ್ರಸ್ತುತ ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ನಟನೆ ಹಾಗೂ ಓದುವುದು ಅವರ ಆಸಕ್ತಿ. ಕೃತಿಗಳು : ಮೌನಯಾನ (ಕಾದಂಬರಿ) , ರೆಕ್ಕೆಯ ಹಾಡು (ಕವನ ಸಂಕಲನ), ಬೆಳದಿಂಗಳು (ಆಧುನಿಕ ವಚನ ಸಂಕಲನ), ಅಲೆದಾಟ (ಕವನ ಸಂಕಲನ). ...

READ MORE

Related Books