ಅಂಚೆ ಅಂಟು ಪರದೆ ನಂಟು

Author : ಉಮೇಶ್ ಕುಲಕರ್ಣಿ

Pages 192

₹ 295.00




Year of Publication: 2012
Published by: ಆಕೃತಿ ಪುಸ್ತಕ
Address: 31/1, ನೆಲಮಹಡಿ, 12ನೇ ಮುಖ್ಯರಸ್ತೆ, ಗಾಯತ್ರಿನಗರ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560010
Phone: 098866 94580, 080-2340 9479

Synopsys

‘ಅಂಚೆ ಅಂಚು ಪರದೆ ನಂಟು’ ಕೃತಿಯು ಉಮೇಶ್ ಕುಲಕರ್ಣಿ ಅವರ ಲೇಖನಸಂಕಲನವಾಗಿದೆ. ಚಲನಚಿತ್ರರಂಗದ ಪಿತಾಮಹರಿಂದ ಅಣ್ಣಾವ್ರ ವರೆಗಿನ ವಿಚಾರಗಳನ್ನು ಇಲ್ಲಿ ಕಾಣಬಹುದು. ಚಲನಚಿತ್ರರಂಗದ ಅದೆಷ್ಟೋ ಪ್ರತಿಭೆಗಳಿಗೆ ಭಾರತ ಸರಕಾರ ಬಿಡುಗಡೆಗೊಳಿಸುವ ಅಂಚೆಚೀಟಿಗಳಲ್ಲಿ ರಾರಾಜಿಸುವ ಯೋಗ ಲಭಿಸಿದೆ. ಈ ಗೌರವವನ್ನು ಪಡೆದ ಅರವತ್ತೈದು ಮಂದಿಯನ್ನು ಅವರ ಬದುಕು-ಸಾಧನೆಗಳ ಸಹಿತ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಇಲ್ಲಿ ನಟರು, ಸಂಗೀತಗಾರರು, ಗಾಯಕರು, ಚಿತ್ರಸಾಹಿತಿಗಳಷ್ಟೇ ಅಲ್ಲದೆ ಸಿನಿಮಾಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಸಿದ ಕಲಾಕಾರರಿದ್ದಾರೆ.

ನಾವು ಇವರೆಲ್ಲರು ದುಡಿದ ಚಲನಚಿತ್ರಗಳನ್ನು ನೋಡಿಯೇ ಇರುತ್ತೇವೆ. ತೆರೆಯ ಮೇಲೆ ಅವರ ಮನೋಜ್ಞ ಅಭಿನಯವನ್ನು ಮೆಚ್ಚಿ ಅವರ ಆರಾಧಕರಾಗುತ್ತೇವೆ. ಆದರೆ ಇವರ ಬದುಕಿನ ಹಿನ್ನೆಲೆಯ ನೋವೋ ನಲಿವೋ ನಮಗೆ ತಿಳಿದಿರುವುದಿಲ್ಲ. ಸಾಧನೆಯ ಉತ್ತುಂಗದಲ್ಲಿದ್ದು ಜನಮನ ರಂಜಿಸಿದ ಕಲಾವಿದರನ್ನು ಅವರ ಮಾನವ ಸಹಜ ದೌರ್ಬಲ್ಯಕ್ಕಾಗಿಯೋ ಜಾತಿಮತಗಳ ಕಾರಣಕ್ಕಾಗಿಯೋ ಕೇವಲವಾಗಿ ಮಾತನಾಡುತ್ತೇವೆ ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ.

About the Author

ಉಮೇಶ್ ಕುಲಕರ್ಣಿ

ಉಮೇಶ್ ಕುಲಕರ್ಣಿ ಅವರು ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಸಿನಿಮಾ ಸೇರಿದಂತೆ ಹಲವಾರು ವಿಚಾರಗಳ ಕುರಿತು ಅಧ್ಯಯನ ನಡೆಸಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು: ಅಂಚೆ ಅಂಟು ಪರದೆ ನಂಟು ...

READ MORE

Reviews

 (ಹೊಸತು, ಮೇ 2012, ಪುಸ್ತಕದ ಪರಿಚಯ)

ಚಲನಚಿತ್ರರಂಗದ ಅದೆಷ್ಟೋ ಪ್ರತಿಭೆಗಳಿಗೆ ಭಾರತ ಸರಕಾರ ಬಿಡುಗಡೆಗೊಳಿಸುವ ಅಂಚೆಚೀಟಿಗಳಲ್ಲಿ ರಾರಾಜಿಸುವ ಯೋಗ ಲಭಿಸಿದೆ. ಈ ಗೌರವವನ್ನು ಪಡೆದ ಅರವತ್ತೈದು ಮಂದಿಯನ್ನು ಅವರ ಬದುಕು-ಸಾಧನೆಗಳ ಸಹಿತ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಇಲ್ಲಿ ನಟರು, ಸಂಗೀತಗಾರರು, ಗಾಯಕರು, ಚಿತ್ರಸಾಹಿತಿಗಳಷ್ಟೇ ಅಲ್ಲದೆ ಸಿನಿಮಾಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಸಿದ ಕಲಾಕಾರರಿದ್ದಾರೆ. ನಾವು ಇವರೆಲ್ಲರು ದುಡಿದ ಚಲನಚಿತ್ರಗಳನ್ನು ನೋಡಿಯೇ ಇರುತ್ತೇವೆ. ತೆರೆಯ ಮೇಲೆ ಅವರ ಮನೋಜ್ಞ ಅಭಿನಯವನ್ನು ಮೆಚ್ಚಿ ಅವರ ಆರಾಧಕರಾಗುತ್ತೇವೆ. ಆದರೆ ಇವರ ಬದುಕಿನ ಹಿನ್ನೆಲೆಯ ನೋವೋ ನಲಿವೋ ನಮಗೆ ತಿಳಿದಿರುವುದಿಲ್ಲ. ಸಾಧನೆಯ ಉತ್ತುಂಗದಲ್ಲಿದ್ದು ಜನಮನ ರಂಜಿಸಿದ ಕಲಾವಿದರನ್ನು ಅವರ ಮಾನವ ಸಹಜ ದೌರ್ಬಲ್ಯಕ್ಕಾಗಿಯೋ ಜಾತಿಮತಗಳ ಕಾರಣಕ್ಕಾಗಿಯೋ ಕೇವಲವಾಗಿ ಮಾತನಾಡುತ್ತೇವೆ. ಇವರಲ್ಲಿ ಜೀವಮಾನವನ್ನೇ ಇದಕ್ಕಾಗಿ ತೇಯ್ದವರಿದ್ದಾರೆ. ಈ ಪುಸ್ತಕದಲ್ಲಿ ಚಲನಚಿತ್ರದ ಪಿತಾಮಹ ದಾದಾ ಸಾಹೇಬ್ ಫಾಲ್ಕೆಯವರಿಂದ ಪ್ರಾರಂಭಿಸಿ, ಅದೇ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಡಾ|| ರಾಜ್‌ ಕುಮಾರ್‌ ಅವರವರೆಗೂ ಮಾಹಿತಿ ಲಭ್ಯವಿದೆ.

Related Books