ಹೀಗಿದ್ದರು ಬಾಪೂ

Author : ಟಿ. ವಿ. ವೆಂಕಟರಮಣಯ್ಯ

Pages 104

₹ 30.00




Year of Publication: 2003
Published by: ಟಿ.ವಿ.ವೆಂಕಟರಮಣಯ್ಯ
Address: ಇಡಬ್ಲ್ಯುಎಸ್‌ 218, ಕೆಎಚ್‌ಬಿ ಕಾಲೋನಿ, 2ನೇ ಹಂತ, 5ನೇ ಕ್ರಾಸ್‌, ಬಸವೇಶ್ವರ ನಗರ, ಬೆಂಗಳೂರು

Synopsys

‘ಹೀಗಿದ್ದರು ಬಾಪೂ’ ಟಿ.ವಿ ವೆಂಕಟರಮಣಯ್ಯ ಅವರ ರಸಪ್ರಸಂಗಗಳ ಸಂಗ್ರಹವಾಗಿದೆ. ಬಾಪೂಜಿಯ ವ್ಯಕ್ತಿತ್ವದ ಹಿರಿಮೆಯನ್ನು ತಿಳಿಸುವ ಅವರು ಜನರೊಂದಿಗೆ ವ್ಯವಹರಿಸುವ ರೀತಿಗಳನ್ನು ಸಂಗ್ರಹಿಸಿ ಈ ಚಿಕ್ಕ ಪುಸ್ತಕದಲ್ಲಿ ಕೊಡಲಾಗಿದೆ. ಅವೆಲ್ಲ ಅಪೂರ್ವ ರಸಪ್ರಸಂಗಗಳೇ ಆಗಿವೆ.

About the Author

ಟಿ. ವಿ. ವೆಂಕಟರಮಣಯ್ಯ

ಟಿ. ವಿ. ವೆಂಕಟರಮಣಯ್ಯ ಅವರು ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರಿನಲ್ಲಿ 1933ರ ಅಕ್ಟೋಬರ್ 8ರಂದು ಜನಿಸಿದರು. ಅವರ ಪ್ರಾರಂಭಿಕ ಶಿಕ್ಷಣ ತೊಣ್ಣೂರು, ಹಿರೇಸಾವೆ, ಕೃಷ್ಣರಾಜ ನಗರಗಳಲ್ಲಿ ನಡೆಯಿತು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಓದಿ, ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಪಡದರು. ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಗ್ರಂಥಾಲಯ ವಿಜ್ಞಾನ ಡಿಪ್ಲೊಮಗಳಿಸಿದರಲ್ಲದೆ, ಇನ್ಸ್‌ಡಾಕ್ ದೆಹಲಿಯಿಂದ ವೈಜ್ಞಾನಿಕ ಪ್ರಲೇಖನ ತರಬೇತಿ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ ಎಂ.ಲಿಬ್ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಜಾನಪದ, ಗ್ರಂಥಸೂಚಿಲೇಖನ ಸೂಚಿ, ಪ್ರಸಂಗ, ಸೂಕ್ತಿ ಸಂಗ್ರಹ, ಧಾರ್ಮಿಕ ಮತ್ತು ಅನೇಕ ಸಾಂಸ್ಕೃತಿಕ ...

READ MORE

Reviews

ಹೊಸತು- 2003- ಜನವರಿ

ಬಾಪೂಜಿಯ ವ್ಯಕ್ತಿತ್ವದ ಹಿರಿಮೆಯನ್ನು ತಿಳಿಸುವ, ಅವರು ಜನರೊಂದಿಗೆ ವ್ಯವಹರಿಸುವ ರೀತಿಗಳನ್ನು ಸಂಗ್ರಹಿಸಿ ಈ ಚಿಕ್ಕ ಪುಸ್ತಕದಲ್ಲಿ ಕೊಡಲಾಗಿದೆ. ಅವೆಲ್ಲ ಅಪೂರ್ವ ರಸಪ್ರಸಂಗಗಳೇ ಆಗಿವೆ. ತೀರಾ ಸಣ್ಣ ವಿಷಯವಾದರೂ ಬಹು ಮುತುವರ್ಜಿ ವಹಿಸುವ ಅವರ ನಡೆವಳಿಕೆಗಳು ನಮ್ಮ ಕಾಲದ ಎಳೆಯರಿಗೆ ಬಹು ಮಹತ್ವದ್ದಾಗಿದೆ. ಒಂದು ಚಿಕ್ಕ ಮಗುವಿನಿಂದ ಹಿಡಿದು ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ವರೆಗೆ ಅವರು ಬಹಳ ಜಾಗರೂಕತೆಯಿಂದ ವರ್ತಿಸುತ್ತಿದ್ದರೆಂಬುದು ಇಲ್ಲಿ ತಿಳಿದುಬರುತ್ತದೆ.

Related Books