
‘ಕನ್ನಡ ನವೋದಯ ಪ್ರವರ್ತಕ ಬಿ.ಎಂ. ಶ್ರೀಕಂಠಯ್ಯ’ ವ್ಯಕ್ತಿ ಪರಿಚಯ ಮತ್ತು ಸೂಕ್ತಿಗಳು ಕೃತಿಯನ್ನು ಪ್ರೊ.ಡಿ. ಲಿಂಗಯ್ಯ ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಪ್ರತಿಭಾವಂತ ದಾರ್ಶನಿಕರ ನುಡಿಗಳು ಭವಿಷ್ಯವಾಣಿಗಳಾಗಿರುತ್ತವೆ. ಅಂಥವರರ ತ್ರಿಕಾಲ ಜೀವನಧಾರೆ ಸಮಸ್ತ ಜನಾಂಗದ ಶ್ರೇಯಸ್ಸಿಗೆ ಹಾಗೂ ಪೋಷಣೆಗೆ ಸಾಧನವಾಗುತ್ತದೆ. ಭಾಷಿಕ ವಿಷಯವೂ ಹಾಗೆಯೇ, ಕನ್ನಡ ಭಾಷೆ ನಡೆದು ಬಂದ ದಾರಿ. ವರ್ತಮಾನದ ಸ್ಥಿತಿ-ಗತಿ, ಭವಿಷ್ಯತ್ತಿನ ಸ್ಥಾನಮಾನ ಯಾವತ್ತೂ ನವೀನ ಪರಿಕಲ್ಪನೆಗೆ ತೆರೆದ ಪುಟವಾಗಿರುತ್ತದೆ.
ಕನ್ನಡ ಭಾಷೆಯ ತಲಸ್ಪರ್ಶಿ ಅಧ್ಯಯನದ ಅರಿವಿರುವವರಿಗೆ ಮಾತ್ರ ನಿಜವಾದ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ. ಕನ್ನಡದ ಕಣ್ವ, ಕನ್ನಡ ನವೋದಯ ಕಾವ್ಯದ ಹರಿಕಾರ, ಆಚಾರ್ಯ ಬಿ.ಎಂ.ಶ್ರೀಕಂಠಯ್ಯ ಅವರ ಕನ್ನಡ ಭಾಷೆಯ ಅಳಿವು-ಉಳಿವು ಬಗೆಗೆ ಅನನ್ಯವಾಗಿ ಮಂಥಿಸಿದವರಲ್ಲಿ ಅಗ್ರಗಣ್ಯರಾಗಿದ್ದಾರೆ’ ಎಂದಿದ್ದಾರೆ ಪ್ರೊ.ಡಿ. ಲಿಂಗಯ್ಯ.
©2025 Book Brahma Private Limited.