
`ಸ್ವಾತಂತ್ರ್ಯ ಹೋರಾಟದ ಹೀರೋಗಳು – ಭಾಗ 1' ಹೋರಾಟಗಾರರ ಜೀವನಗಾಥೆಯನ್ನು ದಾಖಲಿಸುವ ಕೃತಿ ಇದು. ಲೇಖಕ ಬಾಬು ಕೃಷ್ಣಮೂರ್ತಿ ಅವರು ರಚಿಸಿದ್ದಾರೆ. “ಸ್ವಾತಂತ್ರ್ಯ ಹೋರಾಟದ ಹೀರೋಗಳು” ಎಂದು ಹೆಸರು ಹೊತ್ತ ಹೊತ್ತಿಗೆಯಲ್ಲಿ ಭಾರತವನ್ನು ಮಹತ್ವಕ್ಕೆ ನಿಜವಾಗಿ ಏರಿಸಿದ ಮಹಾತ್ಯಾಗಿಗಳ ಹೋರಾಟದ ನೈಜ ಚಿತ್ರಣವಿದೆ. ಇದರ 28 ಅಧ್ಯಾಯಗಳು ನಿಮ್ಮ ರಕ್ತ ಹೆಪ್ಪುಗಟ್ಟಿಸುತ್ತವೆ. ಇಲ್ಲಿ ರಾಣೀ ಲಕ್ಷ್ಮೀಬಾಯಿ ಝಾನ್ಸಿ, ತಾತ್ಯಾಟೋಪಿ, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ತಮಿಳುನಾಡಿನ ಹುತಾತ್ಮರು, ಕೇರಳದ ಶೂರ ರಾಷ್ಟ್ರಭಕ್ತ ದೊರೆಗಳು, ಬ್ರಿಟೀಷರ ಕುತಂತ್ರ, ನಮ್ಮವರ ಒಳದ್ರೋಹ, ಭಾರತದ ದುರದೃಷ್ಟವನ್ನು ಚಿತ್ರಿಸುವಲ್ಲಿ ಲೇಖಕರು ಸಫಲರಾಗಿದಾರೆ.
©2025 Book Brahma Private Limited.