ಗುರು ನಮಸ್ಕಾರ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 75

₹ 140.00




Year of Publication: 1976
Published by: ಅನಾಥ ಸೇವಾಶ್ರಮ ಟ್ರಸ್ಟ್
Address: ಮಲ್ಲಾಡಿಹಳ್ಳಿ

Synopsys

‘ಗುರುನಮಸ್ಕಾರ’ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ) ಅವರ ವ್ಯಕ್ತಿಚಿತ್ರಣ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಶ್ರೀ ಹನುಮದುಪಾಸನೆ, ಶ್ರೀ ಹನುಮದ್‌ವ್ರತ, ಕಾಲ ನಿರ್ಣಯ, ವಿವಿಧ ವಾಹ್ಮಯಗಳಲ್ಲಿ ಶ್ರೀಹನುಮ, ಶ್ರೀ ಮಾರುತಿಯ ನೈಷ್ಠಿಕ ಬ್ರಹ್ಮಚರ್ಯೆ, ತ್ರಿಲೋಕವಂದ್ಯನಾದ ಮಾರುತಿ ಯಾರು?, ಪೂರ್ವಸಿದ್ಧತೆ, ಗುರುನಮಸ್ಕಾರ: ಆಚರಣೆ, ಫಲಶ್ರುತಿ, ಉಪಾಸನೆ, ಆಹಾರಾದಿ ನಿಯಮಗಳನ್ನು ಒಳಗೊಂಡಿದೆ.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books