ಕಲಾಂ ನುಡಿಮುತ್ತು

Author : ಆರ್.ಜಿ.ಡಿ.

Pages 80

₹ 50.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

‘ಕಲಾಂ ನುಡಿಮುತ್ತು’ ಕೃತಿಯು ಡಿ.ಆರ್.ಜಿ ಅವರ ಅಬ್ದುಲ್ ಕಲಾಂ ಅವರ ಕುರಿತ ವ್ಯಕ್ತಿಚಿತ್ರಣ ಕೃತಿಯಾಗಿದೆ. ಅಬ್ದುಲ್ ಕಲಾಂ ಅವರ ಒಂದೊಂದು ಉತ್ತರವೂ ಆಶ್ಚರ್ಯಕರವಾಗಿ ನುಡಿಗಟ್ಟಾಗಿ ರೂಪಾಂತರ ಹೊಂದುತ್ತಿತ್ತು. ಅಂಥ ಮಹನೀಯರ ಮಾತುಗಳನ್ನು ಸಂಗ್ರಹಿಸುವ ಮಹತ್ವದ ಕೆಲಸವನ್ನು ಮಿಶ್ರರಾದ ಆರ್, ದೊಡ್ಡಗೌಡ ಅವರು ಮಾಡಿದ್ದಾರೆ. ಅವರು ಅಬ್ದುಲ್ ಕಲಾಂ ಅವರ ನುಡಿಮುತ್ತುಗಳನ್ನು ಸಂಗ್ರಹಿಸಿಯಿರುವ ಈ ಕೃತಿಯು ತರುಣರಲ್ಲಿ ಸ್ಫೂರ್ತಿ ತುಂಬುವ, ಬಾಲಕರಿಗೆ ದಾರಿಬೆಳಕಾಗುವ ಕೆಲಸ, ನಮ್ಮ ನಾಡು ವಿನಾಕಾರಣ ಒಡೆಯುತ್ತಿರುವ ಹೊತ್ತಲ್ಲಿ ಭವ್ಯ ಭಾರತದ ಕನಸು ಕಂಡಂಥ ಕಲಾಮ್ ಅವರ ಮಾತುಗಳ ಸಂಗ್ರಹ ದೊರಕುತ್ತಿರುವುದು ಅಪೇಕ್ಷಣೀಯ ಮತ್ತು ಆದರಣೀಯ ಕಾರ್ಯವಾಗಿದೆ.

Reviews

ಒಂದು ಮಾತು ಒಂದು ಜೀವನಕ್ಕೆ ಪ್ರೇರಣೆ ಆಗುವುದನ್ನು ನೀವು ಬಲ್ಲಿರಿ, ಮಾತು ಮಂತ್ರವಾಗುತ್ತದೆ ಅನ್ನುವ ರೂಪಕ ನಿಜವಾಗುವುದು ಹೀಗೆ. ಕೆಲವರ ಮಾತಿಗೆ ಅಂಥ ಶಕ್ತಿಯಿರುತ್ತದೆ. ಅಬ್ದುಲ್ ಕಲಾಮ್ ಕೂಡ ಹಾಗೆ ಮಾತುಗಳಲ್ಲೇ ಮಹತ್ತನ್ನು ತೋರಬಲ್ಲವರಾಗಿದ್ದರು. ಎಲ್ಲಾ ಪ್ರಶ್ನೆಗಳಿಗೂ ಅವರ ಬಳಿ ಉತ್ತರ ಇರುತ್ತಿತ್ತು ಮತ್ತು ಒಂದೊಂದು ಉತ್ತರವೂ ಆಶ್ಚರ್ಯಕರವಾಗಿ ನುಡಿಗಟ್ಟಾಗಿ ರೂಪಾಂತರ ಹೊಂದುತ್ತಿತ್ತು. ಅಂಥ ಮಹನೀಯರ ಮಾತುಗಳನ್ನು ಸಂಗ್ರಹಿಸುವ ಮಹತ್ವದ ಕೆಲಸವನ್ನು ಮಿಶ್ರರಾದ ಆರ್, ದೊಡ್ಡಗೌಡ ಅವರು ಮಾಡಿದ್ದಾರೆ. ದೊಡ್ಡಗೌಡರು ಸಪ್ನ ಬುಕ್ ಹೌಸ್‌ನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಒಂದು ತಲೆಮಾರಿನ ಲೇಖಕರ ಪಾಲಿಗೆ ದಾರಿದೀಪ ಆದವರು, ಹೊಸಬರ ಪುಸ್ತಕಗಳನ್ನು ಪ್ರೋತ್ಸಾಹಿಸುತ್ತಾ, ಹಿರಿಯರ ಪುಸ್ತಕಗಳನ್ನು ಪ್ರಕಟಿಸುತ್ತಾ, ಅದರ ನಡುವೆಯೇ ಬರಹವನ್ನೂ ಬೇರೆಯುತ್ತಾ ಬಂದವರು.ಇದೀಗ ಅವರು ಅಬ್ದುಲ್ ಕಲಾಂ ಅವರ ನುಡಿಮುತ್ತುಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ, ಇದು ತರುಣರಲ್ಲಿ ಸ್ಫೂರ್ತಿ ತುಂಬುವ, ಬಾಲಕರಿಗೆ ದಾರಿಬೆಳಕಾಗುವ ಕೆಲಸ, ನಮ್ಮ ನಾಡು ವಿನಾಕಾರಣ ಒಡೆಯುತ್ತಿರುವ ಹೊತ್ತಲ್ಲಿ ಭವ್ಯ ಭಾರತದ ಕನಸು ಕಂಡಂಥ ಕಲಾಮ್ ಅವರ ಮಾತುಗಳ ಸಂಗ್ರಹ ದೊರಕುತ್ತಿರುವುದು ಅಪೇಕ್ಷಣೀಯ ಮತ್ತು ಆದರಣೀಯ ಕಾರ್ಯ.

- ಜೋಗಿ

Related Books