
‘ಹಾರಯಿಕೆಯ ಕವಿ: ಪ್ರೊ. ವಸಂತ ಕುಷ್ಟಗಿ’ ಹೈದರಾಬಾದ್ ಕರ್ನಾಟಕದ ನಾಲ್ಕೂ ಜಿಲ್ಲೆಗಳಲ್ಲಿ ನಡೆದಾಡುವ ವಿಶ್ವಕೋಶ ಎಂದು ಪ್ರಖ್ಯಾತಿ ಪಡೆದ ಡಾ. ವಸಂತ ಕುಷ್ಟಗಿ ಅವರ ಜೀವನ ಮತ್ತು ಕೃತಿಗಳ ಕುರಿತಾದ ಅಧ್ಯಯನಾತ್ಮಕ ಕೃತಿ.
ಲೇಖಕಿ ಸವಿತಾ ಸಿರಗೋಜಿ ಕೃತಿ ರಚಿಸಿದ್ದಾರೆ. ವಸಂತ ಕುಷ್ಟಗಿ ಅವರ ಜೀವನ ಮತ್ತು ಕೃತಿಗಳ ಬಗ್ಗೆ ತಲಸ್ಪರ್ಶಿ ಅಧ್ಯಯನವಿದೆ. ಅವರ ಜೀವನ ಧ್ಯೇಯಗಳು, ತಿರುವುಗಳು, ಹಾಗೂ ಸಾಹಿತ್ಯ ಕೃತಿಗಳ ಬಗ್ಗೆ ಲೇಖಕರು ನಯವಾಗಿ, ಎಳೆಎಳೆಯಾಗಿ ಬಿಡಿಸಿ, ಅನುಕ್ರಮವಾಗಿ ಜೋಡಿಸಿ, ಸುಂದರ ಚಿತ್ತಾರವಾಗುವಂತೆ ಹೆಣೆದಿದ್ದಾರೆ.
©2025 Book Brahma Private Limited.