
`ಆದರ್ಶ ರಾಜಕಾರಣಿ ಎಸ್.ಆರ್ ಬೊಮ್ಮಾಯಿ’ ಸರಜೂ ಕಾಟ್ಕರ್ ಅವರು ಬರೆದಿರುವ ವ್ಯಕ್ತಿಚಿತ್ರಣ ಕೃತಿಯಾಗಿದೆ. ಎಸ್.ಆರ್. ಬೊಮ್ಮಾಯಿ ಅವರದು ನಾಡಿನ ರಾಜಕೀಯ ಪರಂಪರೆಯಲ್ಲಿ ಮರೆಯಲಾಗದ ಹೆಸರಾಗಿದ್ದು ಅವರು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಹೀಗೆ ವಿವಿಧ ರಾಜಕೀಯ ಹುದ್ದೆಗಳನ್ನು ಅಲಂಕರಿಸಿ ಅವುಗಳೆಲ್ಲವಕ್ಕೂ ಗೌರವವನ್ನು ತಂದವರು. ಪಕ್ಷದ ಮಿತಿಯನ್ನು ಮೀರಿ ಸದಾ ಜನಹಿತಕ್ಕೆ ದುಡಿದು ಜನಪ್ರತಿನಿಧಿಗಳು ಹೇಗಿರಬೇಕು ಎನ್ನುವುದಕ್ಕೆ ನಿದರ್ಶನವಾದವರು. ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಒಟ್ಟಾಗಿ ಕಟ್ಟಿಕೊಟ್ಟಿರುವ ಈ ಕೃತಿ ಸಾಂಸ್ಕೃತಿಕ ಅಧ್ಯಯನವೂ ಕೂಡ ಆಗಿದೆ ಎನ್ನುತ್ತಾರೆ ಕೃತಿಗೆ ಬೆನ್ನುಡಿ ಬರೆದಿರುವ ನಾಡೋಜ ಮಹೇಶ ಜೋಶಿ.
©2025 Book Brahma Private Limited.