ಲೇಖಕ ಶ್ರೀಧರ್ ಹೆಚ್.ಜಿ. ಮುಂಡಿಗೇಹಳ್ಳ ಅವರ ಕಾದಂಬರಿ ‘ಪ್ರಸ್ಥಾನ’, ಬದುಕು ತೋರಿದ ದಾರಿ ಎಂಬ ಉಪಶೀರ್ಷಿಕೆ ಹೊಂದಿದೆ.
ಕೃತಿಗೆ ಬೆನ್ನುಡಿ ಬರೆದ ನಿರಂಜನ ವಾನಳ್ಳಿ ಅವರು ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ, ಶಾಸ್ತ್ರ ಸಂಕಲ್ಪ, ರಸದಾಳಿ ಮುಂತಾದ ಸಂಶೋಧನೆ ಕೃತಿಗಳನ್ನು ನೀಡಿದ್ದಾರೆ, ಶ್ರೀಧರ್ ಅವರ ಈ ಹೊಸ ಕಾದಂಬರಿಯಲ್ಲಿ ಅಣೆಕಟ್ಟನ್ನು ನಿಮಿತ್ತವಾಗಿರಿಸಿಕೊಂಡು, ಶ್ರಮಸಂಸ್ಕೃತಿಯನ್ನೇ ಅವಲಂಭಿಸಿರುವ ಗ್ರಾಮೀಣ ಜನಜೀವನದಲ್ಲಿಆಧುನಿಕತೆಯ ಪ್ರವೇಶ ಉಂಟು ಮಾಡಿರುವ ತಲ್ಲಣಗಳನ್ನು ದಾಖಲಿಸುತ್ತದೆ. ಆಧುನಿಕ ವ್ಯವಸ್ಥೆಯೊಂದರ ಪರಿಚಯದ ಮೂಲಕ ಕಾಣಿಸಿಕೊಳ್ಳುವ ದುಡ್ಡಿನ ಮೋಹ ಗ್ರಾಮೀಣ ಜೀವನದಲ್ಲಿದ್ದ ಸಹಜ ಮಾನವೀಯ ಮೌಲ್ಯಗಳಿಗೆ ಕೊಳ್ಳಿ ಇಡುವುದನ್ನು ಚಿತ್ರಿಸುತ್ತದೆ. ಹಾಗಾಗಿ, ಈ ಕಾದಂಬರಿ ಮಾನವೀಯತೆಯನ್ನು, ಮನುಷ್ಯ ಸಂಬಂಧಗಳ ನೆಲೆಯನ್ನು ಶೋಧಿಸುವ ಪ್ರಯತ್ನ ಮಾಡುತ್ತದೆ. ಕರ್ನಾಟಕದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮುಳುಗಿದ ಸಂಸ್ಕೃತಿಯೊಂದರ ಹೃದಯಸ್ಪರ್ಶಿ ಚಿತ್ರಣವನ್ನು ಒಳಗೊಂಡ ಕಾದಂಬರಿಯೂ ಹೌದು. ಮಡೆನೂರು ಹಾಗೂ ಲಿಂಗನಮಕ್ಕಿ ಅಣೆಕಟ್ಟೆಗಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ತಲೆಮಾರುಗಳ ಕತೆಯಲ್ಲ, ಬದಲಾಗಿ ಅಂದು ನಡೆದ ಘಟನಾವಳಿಗಳನ್ನು ಜೀವಂತವಾಗಿ ಅವರ ಕಣ್ಣೆದುರು ತಂದಿರುವ ಚಲನಚಿತ್ರ ಸಮೃದ್ಧ ಜೀವವೈವಿಧ್ಯವನ್ನು ಹೊಂದಿದ ಮಲೆನಾಡಿನ ಒಂದು ಭಾಗ ನೀರಿನಲ್ಲಿ ಮುಳುಗಿ ಹೋದ ಕಥನ. ವಿಶೇಷವಾಗಿ ಮಡೆನೂರು ಅಣೆಕಟ್ಟು ನಿರ್ಮಾಣವಾಗುವುದು ಖಚಿತವಾಗುತ್ತಿದ್ದಂತೆ ಆ ಪರಿಸರದ ಇಡೀ ಜನಸಮುದಾಯ ಅನುಭವಿಸಿದ ತಲ್ಲಣ, ಯಾತನೆಯನ್ನು ಕಣ್ಣೆದುರು ತೆರೆಯುತ್ತಾ ಹೋಗುತ್ತದೆ. ಒಮ್ಮುಖವಾಗಿ ಚಿಂತಿಸುವ ಸರ್ಕಾರಗಳು ಸಹಸ್ರಾರು ಕುಟುಂಬಗಳ ಬದುಕಿನ ನೆಲೆಯನ್ನು ಮೂರಾಬಟ್ಟೆ ಮಾಡಿದ ಕಾಲಘಟ್ಟದ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳ ದಾಖಲೆ ಇದು. ಈ ಕಾದಂಬರಿ ಓದಿಯೂ ಕಣ್ಣು ಮಂಜಾಗದಿದ್ದರೆ ಅಂಥವರ ಮನುಷ್ಯತ್ವದ ಬಗ್ಗೆ ಶಂಕೆ ಮೂಡುತ್ತದೆ ’ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...
READ MORE