ಟಿ. ಸುನಂದಮ್ಮ ಸಾಹಿತ್ಯ ಸಂಪುಟ ೩

Author : ವಸುಂಧರಾ ಭೂಪತಿ

Pages 210

₹ 220.00




Year of Publication: 2023
Published by: ಟಿ ಸುನಂದಮ್ಮ ಸ್ಮಾರಕ ಪ್ರತಿಷ್ಠಾನ
Address: ಪಿ.ಪಿ. ಲೇಔಟ್‌, ಬನಶಂಕರಿ ಮೂರನೇ ಹಂತ, ಬೆಂಗಳೂರು
Phone: 9886692480

Synopsys

ಟಿ. ಸುನಂದಮ್ಮನವರು ಕಥೆ, ಕಾದಂಬರಿಗಳ ಯುಗದಲ್ಲಿ ಹಾಸ್ಯ ಲೇಖನ ರಚಿಸಿ ಜನಮಾನಸಕ್ಕೆ ಹತ್ತಿರವಾದವರು. ಮೊದಲು ಅವರು ರಚಿಸಿದ್ದು, ಕವನ, ಕತೆಯೇ ಆದರೂ ನಂತರ ಹಾಸ್ಯ ಪ್ರಕಾರದಲ್ಲೇ ನೆಲೆ ಕಂಡುಕೊಂಡರು. ಅವರ ಪ್ರಕಾರ ಹಾಸ್ಯ ಸಾಹಿತ್ಯ ರಚನೆ ನಿಜಕ್ಕೂ ಕಷ್ಟಕರವಾದದ್ದು. ಸರ್ಕಸ್ಸಿನಲ್ಲಿ ಹುಡುಗಿಯರು ತಂತಿಯ ಮೇಲೆ ನಡೆದಂತೆ ಎನ್ನುತ್ತಿದ್ದರು. ಯಾರ ಮನವೂ ನೋಯಬಾರದು, ಅಶ್ಲೀಲವಾಗಬಾರದು, ದ್ವಂದ್ವಾರ್ಥಗಳಿಂದ ಕೀಳು ಅಭಿರುಚಿ ಬೆಳೆಸಬಾರದು. ಇಷ್ಟೆಲ್ಲ ನಿಷೇಧ ಹೀರಿಕೊಂಡೇ ಹಾಸ್ಯಸಾಹಿತ್ಯ ರಚಿಸಬೇಕು ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಏಕಮೇವಾದ್ವಿತೀಯ ಎನಿಸಿಕೊಂಡರು. ಸುನಂದಮ್ಮನವರು ಕನ್ನಡದಲ್ಲಿ ಮಾತ್ರವಲ್ಲ ಭಾರತೀಯ ಭಾಷೆಗಳಲ್ಲೇ ದೀರ್ಘಕಾಲ, ಹಾಸ್ಯಸಾಹಿತ್ಯ ರಚಿಸುತ್ತಿದ್ದ ಏಕೈಕ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಟಿ. ಸುನಂದಮ್ಮನವರ ಲೇಖನಿಗೆ ನಿಲುಕದ ವಸ್ತು- ವಿಷಯಗಳನ್ನು ದುರ್ಬೀನು ಹಾಕಿ ಹುಡುಕಬೇಕಾಗುತ್ತದೆ. ಮಧ್ಯಮವರ್ಗದ ಸಾಮಾನ್ಯ ಕುಟುಂಬದ ಭಂಗ-ಬವಣೆ, ಸುಖ-ದುಃಖ, ಇತರರೆದುರು ತಮ್ಮ ಸ್ಥಾನಮಾನ ಎಂದಿಗೂ ಸಣ್ಣದಾಗಬಾರದೆಂದು ಬದುಕು ನಡೆಸುವ ಬಗೆ ಎಲ್ಲವೂ ಸದಭಿರುಚಿಯ ಹಾಸ್ಯದಲ್ಲಿ ಬೆರೆತು ಓದುಗರಿಗೆ ರುಚಿಕಟ್ಟಾದ ರಸಗವಳವನ್ನು ಉಣಬಡಿಸುತ್ತವೆ ಎಂದು ಡಾ. ವಸುಂಧರಾ ಭೂಪತಿ ಬೆನ್ನುಡಿಯಲ್ಲಿ ಬರೆದಿದ್ದಾರೆ.

About the Author

ವಸುಂಧರಾ ಭೂಪತಿ
(05 June 1962)

ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ,  ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ.  ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...

READ MORE

Related Books