
`ಅಭಿನವ ಪಂಪಭಾರತ’ ಕೃತಿಯು ಶಾಂತಿನಾಥ ದಿಬ್ಬದ ಅವರ ಸಂಕಲನವಾಗಿದೆ. ಮಹಾಕವಿ ಪಂಪನು ತನ್ನ ಕೃತಿಗಳ ಮೂಲಕ ಅವಿಚ್ಛಿನ್ನ ಸೃಜನ ಪರಂಪರೆಗೆ ದಾರಿ ಮಾಡಿಕೊಟ್ಟಿದ್ದಾನೆ. ಪ್ರೇರಣೆ ನೀಡಿದ್ದಾನೆ. ಆತನ 'ವಿಕ್ರಮಾರ್ಜುನ ವಿಜಯ' ಮತ್ತು 'ಆದಿಪುರಾಣ' ಎಂಬ ಕೃತಿಗಳನ್ನಾಧರಿಸಿ ಕನ್ನಡದಲ್ಲಿ ಕೆಲವು ಕಾದಂಬರಿ, ನಾಟಕ, ಮತ್ತು ಕವಿತೆಗಳು ರಚನೆಯಾಗಿವೆ. ಆ ಮಾಲಿಕೆಗೆ ಪ್ರೊ. ಶಾಂತಿನಾಥ ದಿಬ್ಬದ ಅವರು ರಚಿಸಿರುವ 'ಅಭಿನವ ಪಂಪಭಾರತ' ಎಂಬ ಕೃತಿಯು ಉತ್ತಮ ಸೇರ್ಪಡೆಯಾಗಿದೆ. ಈ ಕೃತಿಯು ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ಆದಿಕವಿ ಪಂಪ ಅಧ್ಯಯನ ಪೀಠದ ಮೂಲಕ ಪ್ರಕಟವಾಗುತ್ತಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎನ್ನುತ್ತಾರೆ ಪ್ರೊ. ಕೆ.ಬಿ. ಗುಡಸಿ.
©2025 Book Brahma Private Limited.