
‘ಕಾಟ್ರಹಳ್ಳಿ ಎಂಬ ಮಹಾಬಲ ’ ಕೃತಿಯು ಮೇಟಿ ಕೊಟ್ರಪ್ಪ, ಹೆಚ್.ಜಿ. ಪಾಟೀಲ ಹಾಗೂ ಜಿ. ವೀರಣ್ಣ ಅವರ ಸಂಕಲನವಾಗಿದೆ. ಧೀಮಂತ ಪತ್ರಕರ್ತ ಸರ್ವಸ್ಪರ್ಶಿ ಬರಹಗಾರನ ಸಂಸ್ಮರಣೆಯಾಗಿದೆ. ಬೆಂಗಳೂರಿನ ರಾಜಕೀಯ, ಸಾಂಸ್ಕೃತಿಕ ಲೋಕದ ಹೊಕ್ಕು ಬಳಕೆಯಿಂದಾಗಿ ಒಂದೇಪಟ್ಟಿಗೆ ತನ್ನ ಹನ್ನೆರಡು ಪುಸ್ತಕಗಳನ್ನು ಬಿಡುಗಡೆ ಮಾಡಿ ನಮಗೆಲ್ಲ ಅಚ್ಚರಿ ಉಂಟುಮಾಡಿದ್ದ ವ್ಯಕ್ತಿ ಕಾಟ್ರಹಳ್ಳಿ ಮಹಾಬಲೇಶ್ವರ. ವಿಜ್ಞಾನ, ಖಗೋಳ, ಇತರೆ ಕೆಲವು ಕೌತುಕಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ. ಅಜಮಾಸು ನಲವತ್ತು ಪುಸ್ತಕಗಳನ್ನು ದೈತ್ಯನಂತೆ ಬರೆದು ಮುಗಿಸಿದ್ದ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಮಾನವಿಕ ಅಧ್ಯಯನಗಳಿಗೆ ಆಕರವೆನಿಸುವ ಕೃತಿಗಳು ಅದರಲ್ಲಿದ್ದವು.
©2025 Book Brahma Private Limited.