
ಕಥಾ ರಚನೆಯಲ್ಲಿ ವೈವಿಧ್ಯಮಯ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ವಿಶಿಷ್ಟ ಲೇಖಕಿ ಮೀನಾ ಕಾಕೊಡಕಾರ. ಮಧ್ಯಮವರ್ಗ ಮತ್ತು ಕೆಳ ಮಧ್ಯಮವರ್ಗಗಳ ನಿತ್ಯದ ಬದುಕನ್ನು ಆಧರಿಸಿ, ಅವರ ಛಲ, ಹೋರಾಟಗಳನ್ನು, ಮಾನಸಿಕ ಒಳತೋಟಿಗಳನ್ನು ವಾಸ್ತವ ನೆಲೆಯಿಂದ ಚಿತ್ರಿಸಿದ್ದಾರೆ. ಕೆಲವೇ ಪುಟಗಳ ವ್ಯಾಪ್ತಿಯಲ್ಲಿ ಬಹು ಅಡಕವಾಗಿ ಜೀವನ ಪ್ರೀತಿಯ ಸಂದೇಶವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಗಂಭೀರ ಕತೆಗಳೊಂದಿಗೆ ಲಘುಧಾಟಿಯ ಕತೆಗಳನ್ನು ಈ ಸಂಕಲನವು ಒಳಗೊಂಡಿದೆ. ಸರಳ ನಿರೂಪಣೆ ಹಾಗೂ ಬೌದ್ಧಿಕ ಆಯಾಮದೊಂದಿಗೆ ಮನರಂಜನೆಯ ಅಂಶವನ್ನೂ ಹೊಂದಿದ್ದು, ಎಲ್ಲ ವರ್ಗದ ಓದುಗರನ್ನು ಸೆಳೆಯುವ ರೀತಿಯ ಕಥೆಗಳಾಗಿವೆ. ಆಧುನಿಕ ಕೊಂಕಣಿ ಮಹಿಳಾ ಸಾಹಿತ್ಯದ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಲೇಖಕಿಯರಲ್ಲಿ ಮೀನಾ ಕಾಕೋಡಕಾರ್ ಒಬ್ಬರು. ಈ ಸಂಕಲನದಲ್ಲಿ ಲೇಖಕಿ ಗೀತಾ ಶೆಣೈ. ಒಟ್ಟು ಹತ್ತು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
©2025 Book Brahma Private Limited.