
ಬದುಕಿನ ಕಟು ವಾಸ್ತವದ ಚಿತ್ರಣವನ್ನು ನೀಡುವ ಕತೆಗಳ ಸಂಕಲನ ಇದು. ವೈಚಾರಿಕತೆಯ ಭಾವವಿಲ್ಲದೆ, ಶೈಲಿ, ತಂತ್ರಗಳ ಗೋಜಿಗೆ ಹೋಗದೆ ಹೇಳಬೇಕಾಗಿರುವುದನ್ನು ನೇರವಾಗಿ ಹೇಳುವ ಈ ಕಥಾನಕವು ಓದುಗರಿಗೆ ಆಪ್ತ ಅನುಭವವನ್ನು ನೀಡುತ್ತದೆ.
ಪ್ರಸ್ತುತ ಸಂಕಲನದ ಕತೆಗಳು ಮನುಷ್ಯ ಸಂಬಂಧಗಳ ವಿವಿಧ ಮುಖಗಳನ್ನು ಅನಾವರಣಗೊಳಿಸಿವೆ. ಗಂಡನ ದೌರ್ಜನ್ಯದ ಮುಂದೆ ಹೆಂಡತಿ ತೋರುವ ಶರಣಾಗತಿ, ಶಾಶ್ವತವಾಗಿ ಅಗಲಿರುವ ಹೆಂಡತಿಯೊಂದಿಗೆ ಮೃದು ಸ್ವಭಾವದ ಗಂಡ ಉಳಿಸಿಕೊಳ್ಳುವ ಮಾನಸಿಕ ಸಾಂಗತ್ಯ, ಆಸ್ತಿವಿವಾದದ ಹಿನ್ನೆಲೆಯಲ್ಲಿ ಒಡಹುಟ್ಟಿದವನ ಸಾವು ವಿಚಲಿತಗೊಳಿಸದ ಸೋದರರ ಕಟು ಹೃದಯ, ಸ್ನೇಹಿತೆಯರ ಅಪೂರ್ವ ಮಿಲನ, ಮಧುರ ಬಾಂಧವ್ಯದಲ್ಲಿ ಬೆಸೆದುಕೊಳ್ಳುವ ಅತ್ತೆ ಸೊಸೆಯಂದಿರ ಸಂಬಂಧ, ಬಯಲನ್ನು ಮನೆಯಾಗಿಸಿ ದಿನ ಕಳೆಯುವ ಭಿಕಾರಿ ಮತ್ತು ಸುರಕ್ಷಿತ ಫ್ಲಾಟ್ ನಿವಾಸಿಗಳ ನಡುವಿನ ವ್ಯತ್ಯಾಸ ಇಲ್ಲಿಯ ಕತೆಗಳಲ್ಲಿವೆ. ಮೀನಾ ಕಾಕೋಡಕಾರ ಅವರು ಕೊಂಕಣಿಯಲ್ಲಿ ರಚಿಸಿದ್ದ ಕತೆಗಳನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2025 Book Brahma Private Limited.