ಆಧುನಿಕ ಓದುಗರಿಗೆ ಭಗವದ್ಗೀತೆ

Author : ಎಂ.ವಿ. ನಾಡಕರ್ಣಿ

Pages 242

₹ 250.00




Year of Publication: 2020
Published by: ಮನೋಹರ ಗ್ರಂಥ ಮಾಲಾ
Address: ಸುಭಾಶ ಬೀದಿ, ಧಾರವಾಡ

Synopsys

ಆಧುನಿಕ ಓದುಗರಿಗೆ ಭಗವದ್ಗೀತೆ ಎಂಬುದು ಹಿರಿಯ ಲೇಖಕ ಎಂ.ವಿ. ನಾಡಕರ್ಣಿ ಅವರ ಕೃತಿ. ಇತಿಹಾಸ, ಭಾಷ್ಯಗಳು ಮತ್ತು ತತ್ವಜ್ಞಾನ ಎಂಬ ಉಪಶೀರ್ಷಿಕೆಯಡಿ ಲೇಖಕರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಭಗವದ್ಗೀತೆಯ ಶ್ರೇಷ್ಠತೆ, ಮಹತ್ವ, ವಿಶ್ವವ್ಯಾಪಕತ್ವದ ಅಗಾಧತೆ ಇತ್ಯಾದಿ ತೋರಲಾಗಿದೆ. ಬದುಕಿಗೆ ಭಗವದ್ಗೀತೆಯ ಸಾರ ಎಷ್ಟು ಮುಖ್ಯ, ಅನುಕರಣೀಯ, ಅನುಸರಣೀಯ ಎಂಬುದನ್ನು ಸಮರ್ಥಿಸುವ ವಿಚಾರಗಳು ಇಲ್ಲಿ ಸಂಕಲನಗೊಂಡಿವೆ. ಆಧುನಿಕ ಓದುಗರಲ್ಲಿ ಇಂತಹ ಕೃತಿಯ ಕುರಿತು ಅಸಡ್ಡೆಗಳು ಕಾಣಬರುತ್ತಿರುವ ಸನ್ನಿವೇಶದಲ್ಲಿ ಈ ಕೃತಿ ಸೂಕ್ತ ಉತ್ತರ ನೀಡಿದಂತಿದೆ.

About the Author

ಎಂ.ವಿ. ನಾಡಕರ್ಣಿ

ಹಿರಿಯ ಲೇಖಕ ಪ್ರೊ. ಎಂ.ವಿ. ನಾಡಕರ್ಣಿ (ಮಂಗೇಶ ವೆಂಕಟೇಶ ನಾಡಕರ್ಣಿ-1933-2007) ಅವರು ಉತ್ತರಕನ್ನಡ ಜಿಲ್ಲೆಯವರು. ಹೈದ್ರಾಬಾದ ಹಾಗೂ ಸಿಂಗಾಪುರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾಷಾ ಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದು, ಶ್ರೀ ಅರವಿಂದರ ಜೀವನದಿಂದ ಪ್ರಭಾವಿತರಾದವರು. ಪಾಂಡಿಚೇರಿಯ ಶ್ರೀ ಅರವಿಂದ ಆಶ್ರಮದಲ್ಲಿ (1995ರ ನಂತರ) ಅರವಿಂದರ ಮಹಾಕೃತಿ-ಸಾವಿತ್ರಿ ಕುರಿತು ಪ್ರವಚನ ಹೇಳುತ್ತಿದ್ದರು. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಕರಾಗಿದ್ದರು. ಕೃತಿಗಳು: ಶ್ರೀ ಅರಬಿಂದೊ, ದಿ. ಮದರ್, ಹಿಂದು ಧರ್ಮ: ಹಿಂದು-ಇಂದು, ...

READ MORE

Related Books