ಧರ್ಮ ಸಂಭವ ಅಥವಾ ಧರ್ಮದ ಮೂಲ ತತ್ವಗಳು

Author : ಪಂಡಿತ ತಾರಾನಾಥ

Pages 157

₹ 1.00




Year of Publication: 1931
Published by: ಆಲೂರು ವೆಂಕಟರಾಯ
Address: ಸಾಧನಕೇರಿ, ಧಾರವಾಡ

Synopsys

ಚಿಂತಕ ಪಂಡಿತ ತಾರಾನಾಥರು ಬರೆದ ಗ್ರಂಥ-ಧರ್ಮ ಸಂಭವ. ಈ ಗ್ರಂಥವು ಅವರನ್ನು ಉತ್ತಮ ಚಿಂತಕರ ಸಾಲಿನಲ್ಲಿ ನಿಲ್ಲಿಸಿದೆ. ಧರ್ಮದ ಬಗ್ಗೆ ಖಚಿತವಾದ ವ್ಯಾಖ್ಯಾನಗಳು, ಅದರ ಸಮರ್ಥ ವಿವರಣೆ, ದುರುಪಯೋಗದ ಸಾಧ್ಯತೆ ಕುರಿತ ಅವರ ದೂರದೃಷ್ಟಿ ಎಲ್ಲವನ್ನೂ ಒಳಗೊಂಡ ಗಂಭೀರ ಕೃತಿ.

ನಿಷ್ಠುರವಾದಿಯಾಗೇ ಬದುಕಿದ್ದ ಅವರು ಬರೆಹದಲ್ಲೂ ನಿಷ್ಠುರವಾದಿಗಳು ಎಂಬುದನ್ನು ಧರ್ಮ ಸಂಭವ ಗ್ರಂಥ ಕನ್ನಡಿ ಹಿಡಿಯುತ್ತದೆ. ಜ್ಞಾನವು ಒಂದು ಧರ್ಮ ಪ್ರತಿಪಾದಿಸಿದರೆ ಅಜ್ಞಾನವೂ ತನ್ನ ಸ್ವಾರ್ಥಕ್ಕಾಗಿ ಮತ್ತೊಂದು ಧರ್ಮವನ್ನು ಸೃಷ್ಟಿಸಿಕೊಂಡಿದೆ. ಈ ಎರಡರ ಮಧ್ಯೆ ಸಂಘರ್ಷದ ಫಲವಾಗಿ ಘರ್ಷಣೆಗಳು ಸಂಭವಿಸುತ್ತಿವೆ ಎಂಬುದು ಪಂಡಿತ ತಾರಾನಾಥರ ಸರಳ ಸಮರ್ಥನೆಯಾಗಿದೆ. ವಿಚಾರ ವಿಪ್ಲವ,ಮತವೋ ಸತ್ಯವೋ, ದೇವರ ಮೊದಲು ತೊದಲು, ನಿಸರ್ಗ ಮತ್ತು ಕೃತ್ರಿಮತೆ, ಸಹಜ ಸಮರಸ ಹೀಗೆ ಒಟ್ಟು ಏಳು ಅಧ್ಯಾಯಗಳು ಧರ್ಮದಂತಹ ವಿಷಯವನ್ನು ತುಂಬಾ ಗಂಭೀರವಾಗಿ ಚರ್ಚಿಸುತ್ತವೆ. ಇಲ್ಲಿಯ ಶೈಲಿ ತುಂಬಾ ಪ್ರಭಾವಿತವಾಗಿದೆ. ವಿಷಯ ಮಂಡನೆಯೂ ಅತ್ಯಂತ ತರ್ಕಬದ್ಧ ಹಾಗೂ ಸತ್ಯದ ಪ್ರತಿಪಾದನೆಯಾಗಿ ಅದರ ವಿರಾಟ ಸ್ವರೂಪವನ್ನು ಓದುಗರಲ್ಲಿ ಮನದಟ್ಟು ಮಾಡುತ್ತದೆ.

About the Author

ಪಂಡಿತ ತಾರಾನಾಥ
(05 June 1891 - 30 October 1942)

ಪಂಡಿತ್ ತಾರಾನಾಥರು (ಜನನ: 1891ರ ಜೂನ್ 5ರಂದು ) ಮಂಗಳೂರಿನವರು. ವೈದ್ಯರು, ಯೋಗ ಆಯುರ್ವೇದ ತಜ್ಞರು, ಸಮಾಜ ಸುಧಾರಕರು. ಹೈದ್ರಾಬಾದಿನಲ್ಲಿ ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಣ ನಂತರ ವೈದ್ಯಕೀಯ ಕಾಲೇಜು ಸೇರಿದರು. ಅವರ ಅಸಾಧಾರಣ ಪ್ರತಿಭೆಯು ಅವರನ್ನು ಜನರಿಂದ ದೂರ ಇರಿಸುತ್ತಲೇ ಇತ್ತು. ದೇಹಶಾಸ್ತ್ರದ ಸಹಾಯಕ ಅಧ್ಯಾಪಕರಾಗಿದ್ದರು. ತಾರಾನಾಥರನ್ನು ಬೀದರಿಗೆ ವರ್ಗಾವಾಯಿತು. ಬೀದರಿಗೆ ಆಗಮಿಸಿದ್ದ ನೇಪಾಳದ ಯೋಗಿ ಉತ್ತಮದಾಸ ಪರಮಹಂಸರು ಮತ್ತು ಯೋಗೀಶ್ವರಾನಂದರಿಂದ ಯೋಗ ಮತ್ತು ಆಯುರ್ವೇದದ ದೀಕ್ಷೆ ಪಡೆದರು. ಆಧ್ಯಾತ್ಮಿಕ ರಹಸ್ಯ ಅನುಭವಗಳನ್ನು ಪಡೆದರು. ದೈಹಿಕ ಕಾಹಿಲೆಗಳಿಗೆ ಭೌತಿಕದ ಬದಲು ಮಾನಸಿಕ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿ ಎಂದು ನಂಬಿದ್ದರು. ಸರ್ವರನ್ನೂ ಸಮಾನವಾಗಿ ...

READ MORE

Related Books