ಯಕ್ಷಮಾರ್ಗಮುಕುರ

Author : ಮನೋರಮಾ ಬಿ.ಎನ್

Pages 824

₹ 1600.00
Year of Publication: 2022
Published by: ಕುರಿಯ ವಿಠ್ಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ
Address: ಉಜಿರೆ, ದಕ್ಷಿಣ ಕನ್ನಡ ಜಿಲ್ಲೆ- 574240
Phone: 9449510666

Synopsys

ಲೇಖಕಿ ಮನೋರಮ ಬಿ.ಎನ್.‌ ಅವರ ಸಂಶೋಧನಾ ಕೃತಿ ʻಯಕ್ಷಮಾರ್ಗಮುಕುರʼ. ಪ್ರಾಚೀನಗ್ರಂಥಗಳ ಶ್ಲೋಕಗಳನ್ನು, ಅದರಲ್ಲಿರುವ ಕ್ಲಿಷ್ಟ ವಿಷಯಗಳನ್ನು ಸರಳ ಮಾಡಿ ಅವುಗಳ ಅರ್ಥ, ವಿಶ್ಲೇಷಣೆಯನ್ನು ಆಧಾರಸಹಿತ ಪುಸ್ತಕದಲ್ಲಿ ಮಂಡಿಸಿದ್ದಾರೆ. ಹೆಜ್ಜೆಗಾರಿಕೆಯ ಬಗೆಬಗೆಯ ವೈವಿಧ್ಯತೆಗಳನ್ನೂ ವಿವರಿಸಿದ್ದಾರೆ. ಜೊತೆಗೆ ಪ್ರಾಚೀನ ಗ್ರಂಥಗಳ ಹೆಸರು, ಬರೆದವರು, ರಚಿತವಾದ ಕಾಲ, ಮಹತ್ವ ಎಲ್ಲವನ್ನೂ ತಮ್ಮ ಸಂಶೋಧನೆಯಿಂದ ಕಟ್ಟಿಕೊಟ್ಟಿದ್ದಾರೆ. ಹೀಗೆ ಮನೋರಮ ಅವರು ತಮ್ಮ ಪುಸ್ತಕದ ಮೂಲಕ ಯಕ್ಷಗಾನ ನಾಟ್ಯಲಕ್ಷಣಗಳನ್ನು ಸಾಮಾನ್ಯ ಜನರಿಗೆ ಅರ್ಥಮಾಡಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ.

About the Author

ಮನೋರಮಾ ಬಿ.ಎನ್

ಮನೋರಮಾ ಬಿ.ಎನ್ ಅವರು ಮೂಲತಃ ಮಡಿಕೇರಿಯವರು.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ಭರತನಾಟ್ಯ,-ಈ ಎರಡರಲ್ಲೂ ಸ್ನಾತಕೋತ್ತರ ಪದವೀಧರರು. ಭರತನಾಟ್ಯದ ಸಾಮಾಜಿಕ ಸಂವಹನಗಳ ಕುರಿತು ಸಂಶೋಧನಾ ವಿದ್ಯಾರ್ಥಿ. ‘ನೂಪುರ ಭ್ರಾಮರಿ’ ಪ್ರತಿಷ್ಠಾನದ ಅಧ್ಯಕ್ಷೆಯಾಗಿದ್ದಾರೆ.  ಕೃತಿಗಳು : ಭಾರತೀಯ ನಾಟ್ಯ ಸಂಪ್ರದಾಯಗಳು ಮತ್ತು ಯಕ್ಷಗಾನ, ಮಹಾಮುನಿ ಭರತ, ಮಾರ್ಗ ಮುಕುರ. ...

READ MORE

Related Books