ಭಕ್ತಿ ಕುಸುಮಾಂಜಲಿ

Author : ಎಂ.ಜಿ. ದೇಶಪಾಂಡೆ

Pages 80

₹ 40.00




Year of Publication: 2006
Published by: ಶ್ರೀಹರಿ ಪ್ರಕಾಶನ
Address: #15-03-102, ಲಕ್ಷ್ಮಿನಿಲಯ, ರಾಂಪೂರೆ ಕಾಲೊನಿ, ಮನ್ನಳ್ಳಿ ರಸ್ತೆ, ಬೀದರ-585403
Phone: 9449661161

Synopsys

ಖ್ಯಾತ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರು ಅಧ್ಯಾತ್ಮ ಕುರಿತು ರಚಿಸಿದ ಕವನಗಳ ಸಂಕಲನ-ಭಕ್ತಿ ಕುಸುಮಾಂಜಲಿ. ಒಟ್ಟು 69 ಕವಿತೆಗಳಿವೆ. ಇಲ್ಲಿಯ ಕಾವ್ಯಗಳು ಬದುಕಿನ ನೈಜ ಸತ್ಯದ ಅರಿವನ್ನು ಮೂಡಿಸುವಲ್ಲಿ ಹಾತೊರೆಯುತ್ತವೆ .ಈ ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಹಂಸ ಕವಿ ಬೀದರ್ ‘ ಎಂ. ಜಿ. ದೇಶಪಾಂಡೆ. ಸಂಕ್ಷಿಪ್ತ ನಾಮದಿಂದಲೇ ಧರಿನಾಡಿನ ಸಾಹಿತಿಗಳಿಗೆ ಚಿರಪರಿಚಿತರು .ಪ್ರಕಾಶಜ್ಯೋತಿ , ಹೂ ಬಡಿದಾಗ , ಭ್ರಮೆ, ಪಾರಿಜಾತ, ಅನ್ವೇಷಣೆ, ಒಲವಿನ ಚಿತ್ತಾರಗಳು ಮುಂತಾದ ಕೃತಿಗಳು ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿದವರು .ಇಲ್ಲಿನ ಕವಿತೆಗಳು ಆಧ್ಯಾತ್ಮಿಕ ಲೋಕದಲ್ಲಿ ಬೆಳಕು ಚೆಲ್ಲುವಲ್ಲಿ ಸಮರ್ಥ ವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನಿನ್ನ ಪಾದಗಳಲ್ಲಿ.., ಚಿಂತನೆಯ ಕ್ಷಣ, ಏತಕ್ಕಾಗಿ, ನವನೀತ , ಬಯಲು, ಕೋರುವೆ , ಯಾರು ನಿನ್ನವರು , ನಿನ್ನ ನೆನಹು, ಕದ, ನೆನಪು ,ಗುರುವಿನ ಪಾದ, ಸೊಲ್ಲು ,ನಿತ್ಯ ನಿತ್ಯ, ಅಚಲ ನಿರ್ಧಾರ ಮುಂತಾದ ಕವಿತೆಗಳು ಓದುಗರಿಗೆ ಮನತಣಿಸುತ್ತವೆ ಎಂದು ಕವಿಗಳು ಹೇಳಿದ್ದಾರೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books