ಬುದ್ಧ ಮತ್ತು ಆತನ ಧಮ್ಮ

Author : ಎನ್. ಜಗದೀಶ್ ಕೊಪ್ಪ

Pages 648

₹ 300.00




Year of Publication: 2018
Published by: ಪಾಲಿ ಇನ್ ಸ್ಟಿಟ್ಯೂಟ್
Address: ಕೋರ್ಟ್ ರಸ್ತೆ, ಕಲಬುರಗಿ- 585102
Phone: 08472249090

Synopsys

‘ಬುದ್ಧ ಮತ್ತು ಆತನ ಧಮ್ಮ’ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಆಂಗ್ಲ ಕೃತಿ. ಲೇಖಕ ಜಗದೀಶ್ ಕೊಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.ಭಾರತೀಯ ಹಾಗೂ ಪಾಶ್ಚಾತ್ಯಭಾಷೆಗಳಲ್ಲೂ ಗೌತಮಬುದ್ಧನ ಮೇಲೆ ಬಂದಿರುವ ಎಲ್ಲ ಕೃತಿಗಳ ಪರಾಮರ್ಶನ ಮಾಡಿ, ಪಾಲಿ-ಸಂಸ್ಕೃತ ಗ್ರಂಥಗಳ ಸಮಗ್ರ ಅಧ್ಯಯನ ನಡೆಸಿ ಅವರು ನಿರ್ವಾಣಗೊಳ್ಳುವ ಒಂದು ವರ್ಷದ ಹಿಂದೆಯೇ ಇದನ್ನು ಪ್ರಕಟಣೆಗೆ ಸಿದ್ಧಪಡಿಸಿದ್ದರು. ಅವರು ಜೀವಿತಾವಧಿಯಲ್ಲಿ ಈ ಕೃತಿಯು ಪ್ರಕಟವಾಗಿರಲಿಲ್ಲ 1957ರಲ್ಲಿ ಪ್ರಕಟಗೊಂಡಿತು. ‘ಬುದ್ಧ ಆ್ಯಂಡ್ ಹಿಸ್ ಧಮ್ಮ’ ಕೃತಿ ರಚನೆಯ ಮೂಲಕ ಭಾರತೀಯ ದರ್ಶನ ಕ್ಷೇತ್ರಕ್ಕೆ ಡಾ. ಅಂಬೇಡ್ಕರ್ ಅಮೂಲ್ಯ ಕೊಡುಗೆ ನೀಡಿದ್ದಾರೆ.

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Related Books